ನ್ಯೂಸ್

ನನ್ನ ಗಂಡ ಲೈಂಗಿಕವಾಗಿ ಅಸಮರ್ಥ; ಮಗು ಬೇಕೆಂದು ಮಾವ ಲೈಂಗಿಕ ಕಿರುಕುಳ; ನಿವೃತ್ತ ಎಸಿಪಿ ವಿರುದ್ದ ಸೊಸೆ ದೂರು| Sexual harassment

Sexual harassment: ನನ್ನ ಗಂಡ ಲೈಂಗಿಕವಾಗಿ ಅಸಮರ್ಥ, ಆದರೆ ಮೊಮ್ಮಗ ಬೇಕೆಂದು ನನ್ನ ಮಾವ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ  ನನ್ನ ಪತಿ ಮತ್ತು ಅತ್ತೆ ಮಾವನ ಮೂಲಕ ಮಗು ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಪುಣೆಯಲ್ಲಿ ನವವಿವಾಹಿತ ಮಹಿಳೆಯೊಬ್ಬರು ಠಾಣೆಗೆ ದೂರು ನೀಡಿದ್ದಾರೆ.

ಪುಣೆಯಲ್ಲಿ ಶುಕ್ರವಾರ (ಸೆ.12) ತಮ್ಮ ನವವಿವಾಹಿತ ಸೊಸೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಹಕಾರನಗರದ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ ಆಕೆಯ ಪತಿ, ಅತ್ತೆ ವಿರುದ್ಧವೂ ಎಫ್​ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಮಹಿಳೆ ಠಾಣೆಗೆ ನೀಡಿದ ದೂರಿನ ಪ್ರಕಾರ, ತನ್ನ ಪತಿ ಲೈಂಗಿಕವಾಗಿ ಶಕ್ತಿಹೀನನಾಗಿದ್ದು, ಮಗುವನ್ನು ಹುಟ್ಟಿಸಲು ಅಸಮರ್ಥ ಎಂದು ಆರೋಪಿಸಿದ್ದಾರೆ. ಮಗುವಿಗಾಗಿ ವೈದ್ಯಕೀಯ ಸಮಾಲೋಚನೆ ಪಡೆಯುವ ಬದಲು ಇಲ್ಲ, ಐವಿಎಫ್​ ಚಿಕಿತ್ಸೆ ಅಥವಾ ದತ್ತು ಸ್ವೀಕಾರದಂತಹ ಪರ್ಯಾಯಗಳನ್ನು ಅನ್ವೇಷಿಸುವ ಬದಲು, ತನ್ನ ಪತಿ ಮತ್ತು ಅತ್ತೆ ತನ್ನ ಮಾವನ ಮೂಲಕ ಮಗುವನ್ನು ಗರ್ಭಧರಿಸುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.

ಮೊಮ್ಮಕ್ಕಳಿಗಾಗಿ ಕುಟುಂಬದ ಆಸೆಯನ್ನು ಈಡೇರಿಸುವ ನೆಪದಲ್ಲಿ ಮಾವ ತನ್ನ ಒಪ್ಪಿಗೆಯಿಲ್ಲದೆ ಪದೇ ಪದೇ ತನ್ನ ಕೋಣೆಗೆ ಪ್ರವೇಶಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರು. ಮಾವನ ಕೃತ್ಯಗಳನ್ನು ಪತಿ ಮತ್ತು ಅತ್ತೆ ಅನುಮೋದಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಐದು ತಿಂಗಳ ಹಿಂದೆ ಈ ಜೋಡಿ ವಿವಾಹವಾಗಿದ್ದರು. ವಿವಾಹದ ನಂತರ 15 ದಿನಗಳ ಕಾಲ ಹನಿಮೂನ್​ಗೆ ಮಹಾಬಲೇಶ್ವರಕ್ಕೆ ಹೋಗಿದ್ದು, ಅಲ್ಲಿ ಮಧುಚಂದ್ರದ ಸಮಯದಲ್ಲಿ ತನ್ನ ಪತಿ ದೈಹಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿದ್ದಾಗಿ ಆರೋಪಿಸಿದ್ದಾರೆ. ಇದು ಅವರ ಲೈಂಗಿಕ ಸಮರ್ಥತೆ ಕಾರಣಕ್ಕೆ ಒಪ್ಪಿರಲಿಲ್ಲ ಎಂದಿದ್ದಾರೆ.

ತನ್ನ ಮಾವ ಬೇಡಿಕೆಗಳನ್ನು ಇಟ್ಟಿದ್ದಲ್ಲದೆ, ಬಲವಂತವಾಗಿ ತನ್ನ ಕೋಣೆಗೆ ಹಲವು ಬಾರಿ ಪ್ರವೇಶಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಈ ಒಳನುಗ್ಗುವಿಕೆಗಳು, ಅವನೊಂದಿಗೆ ಲೈಂಗಿಕ ಕ್ರಿಯೆಗೆ ಒಳಗಾಗುವಂತೆ ಪದೇ ಪದೇ ಬೇಡಿಕೆಗಳನ್ನು ಇಡುತ್ತಿದ್ದವು ಎಂದು ಅವರು ಆರೋಪಿಸಿದ್ದಾರೆ. (ಏಜೆನ್ಸೀಸ್)