ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಸಿಇಒ ಎಲೋನ್ ಮಸ್ಕ್(Elon Musk) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ತನ್ನ ಎಲ್ಲಾ 11 ಮಕ್ಕಳು ಮತ್ತು ಅವರ ತಾಯಂದಿರನ್ನು ಒಂದೇ ಸ್ಥಳದಲ್ಲಿ ಇರಿಸಲು ಯೋಜಿಸಿದ್ದಾರೆ.
ಇದನ್ನೂ ಓದಿ: King Charles -III: ಭಾರತದಲ್ಲಿ ಬ್ರಿಟಿಷ್ ರಾಜದಂಪತಿ ಸೀಕ್ರೇಟ್ ಟ್ರಿಪ್: ಬೆಂಗಳೂರಿಗೆ ಬಂದಿದ್ದು ಇದೇ ಕಾರಣಕ್ಕೆ ನೋಡಿ..
ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ 14,400 ಚದರ ಅಡಿ ವಿಸ್ತೀರ್ಣದ ಕಟ್ಟಡ ಮತ್ತು 35 ಮಿಲಿಯನ್ ಡಾಲರ್ (2,94,29,12,000ರೂ.) ಮೌಲ್ಯದ ಆರು ಬೆಡ್ ರೂಂ ಗಳನ್ನೊಳಗೊಂಡ ಭವ್ಯವಾದ ಬಂಗಲೆಯನ್ನು ತನ್ನ ದೊಡ್ಡ ಕುಟುಂಬಕ್ಕೆ ಒದಗಿಸಿಕೊಟ್ಟಿದ್ದಾರೆ.
ಮಸ್ಕ್ ಅವರ ಟೆಕ್ಸಾಸ್ ಮನೆಯಿಂದ ಹೊರಟರೆ ಕೇವಲ 10 ನಿಮಿಷದಲ್ಲಿ ಈ ಬಂಗಲೆ ತಲುಪಬಹುದಾಗಿದೆ. ತನ್ನ ಎಲ್ಲಾ ಮಕ್ಕಳು ಮತ್ತು ಹೆಂಡತಿಯರು ಒಂದೇ ಸ್ಥಳದಲ್ಲಿದ್ದರೆ ಪರಸ್ಪರ ಸಹಕಾರ ಮತ್ತು ಹೊಂದಾಣಿಕೆಯಿಂದ ಇರುತ್ತಾರೆ ಎಂದು ಮಸ್ಕ್ ಭಾವಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮಸ್ಕ್ ಪ್ರಸ್ತುತ ಶಿವೋನ್ನೆ ಗಿಲ್ಲಿಸ್ ಜೊತೆ ಸಂಬಂಧ ಹೊಂದಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದಾರೆ. ಗಿಲ್ಲಿಸ್ 2021 ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗಿಲ್ಲಿಸ್ ಮತ್ತು ಮಸ್ಕ್ ಇನ್ನೂ ಅಧಿಕೃತವಾಗಿ ಮದುವೆಯಾಗಿಲ್ಲ. ಇವರಿಬ್ಬರು ತಮ್ಮ ಅವಳಿ ಮಕ್ಕಳೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದಾಗ ಸತ್ಯ ಬೆಳಕಿಗೆ ಬಂದಿತು.
ಕೆನಡಾದ ಗಾಯಕಿ ಗ್ರಿಮ್ಸ್ ಗಿಲ್ಲಿಸ್ಗಿಂತ ಮುಂಚಿನ ಹೆಂಡತಿಯಾಗಿದ್ದು, ಮೂರು ಮಕ್ಕಳನ್ನು ಹೊಂದಿದ್ದಾರೆ. ಪತ್ನಿ ಜಸ್ಟಿನ್ ವಿಲ್ಸನ್ ಅವರಿಗೆ 5 ಮಕ್ಕಳಿವೆ. ಮಸ್ಕ್ಗೆ 2002 ರಿಂದ ಇಲ್ಲಿತನಕ 12 ಮಕ್ಕಳಿಗೆ ತಂದೆಯಾಗಿದ್ದಾರೆ. ಜಸ್ಟಿನ್ ಮೊದಲ ಮಗು ಕೇವಲ 10 ವಾರಗಳ ವಯಸ್ಸಿನಲ್ಲಿ ಹಠಾತ್ ಶಿಶು ಸಾವಿನ ಸಿಂಡ್ರೋಮ್‌ನಿಂದ ಮೃತಪಟ್ಟಿದೆ.
ಇದನ್ನು ತಿಳಿದ ನೆಟಿಜನ್ ಗಳು ಎಲಾನ್ ಮಸ್ಕ್ ಸಂಪತ್ತಿಗೆ ಹೋಲಿಸಿದರೆ ನೂರಾರು ಕೋಟಿ ಖರ್ಚು ಮಾಡಿ ತನ್ನ ಬೃಹತ್ ಕುಟುಂಬಕ್ಕೆ ಭವ್ಯವಾದ ಮನೆ ಕಟ್ಟುವುದು ದೊಡ್ಡ ವಿಚಾರವೇನಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.