ನ್ಯೂಸ್

ಕ್ರೀಡೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಿ; ರವೀಂದ್ರಗೌಡ ಪಾಟೀಲ

ರಾಣೆಬೆನ್ನೂರ: ಶಾಲಾ-ಕಾಲೇಜ್ ಹಂತದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ಆರೋಗ್ಯಕರ ಜೀವನ ಪಡೆಯಲು ಸಾಧ್ಯವಾಗಲಿದೆ ಎಂದು ತಾಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಹೇಳಿದರು.
ತಾಲೂಕಿನ ಮುಷ್ಟೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಇಟಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ರೇಖಾ ಪುಟ್ಟಕ್ಕನವರ, ಉಪಾಧ್ಯಕ್ಷೆ ಚಂದ್ರಮ್ಮ ಹಿರೇಮಠದ ಕ್ರೀಡಾಜ್ಯೋತಿ ಬೆಳಗಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಓಲೇಕಾರ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಸುನಿತಾ ಡಿ., ಆರ್.ಪಿ. ರವಿಕುಮಾರ, ಬಸವಣ್ಣೆಪ್ಪ ದೇವರಮನಿ, ಹರಿಹರಗೌಡ ಪಾಟೀಲ, ಪ್ರಕಾಶರಡ್ಡಿ ಯರೇಕುಪ್ಪಿ, ಬಿ.ಸಿ. ಯಲ್ಲಕ್ಕನವರ, ಮಂಜಪ್ಪ ಪುಟ್ಟಕ್ಕನವರ, ಶಂಭುನಗೌಡ ಪಾಟೀಲ, ಅಣ್ಣಪ್ಪ ಅಜ್ಜೇರ, ಬಸವರಾಜ ಕಾಯಕದ ಮತ್ತಿತರರು ಉಪಸ್ಥಿತರಿದ್ದರು.