ನವದೆಹಲಿ: ವಸ್ತುಸಂಗ್ರಹಾಲಯದಲ್ಲಿ ಅನೇಕ ದುಬಾರಿ ಕಲಾಕೃತಿಗಳನ್ನು ಕಾಣಬಹುದು. ಮೇಲ್ನೋಟಕ್ಕೆ ಮಾಮೂಲಿ ಎನಿಸುವ ಈ ವಸ್ತುಗಳು ಲಕ್ಷ, ಕೋಟಿ ಬೆಲೆಗೆ ಮಾರಾಟವಾಗುತ್ತದೆ. ಆದರೆ ಮ್ಯೂಸಿಯಂ ಉದ್ಯೋಗಿಯೊಬ್ಬ ಇದರ ಲಾಭ ಪಡೆದು ಶ್ರೀಮಂತನಾಗಿದ್ದಾನೆ. ಈತ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದ ಮೂಲ ಕಲಾಕೃತಿಯನ್ನು ತೆಗೆದುಕೊಂಡು ನಕಲಿಯನ್ನು ಇಟ್ಟನು. ಹೀಗೆ ಮಾಡಿ ಮಿಲಿಯನೇರ್ ಕೂಡ ಆದ ಅವನು ರೋಲ್ಸ್ ರಾಯ್ಸ್ ಕಾರು ಮತ್ತು ದುಬಾರಿ ವಾಚ್‌ಗಳನ್ನು ಖರೀದಿಸಿದನು.
ಸದ್ಯ ಪ್ರಕರಣ ಬೆಳಕಿಗೆ ಬಂದಿದ್ದು, ಈ ಘಟನೆ ನಡೆದದ್ದು ಜರ್ಮನಿಯಲ್ಲಿ ಎನ್ನಲಾಗಿದೆ. ಕಳ್ಳತನ ಮಾಡಿದ ವ್ಯಕ್ತಿ ಮೇ 2016 ರಿಂದ ಏಪ್ರಿಲ್ 2018 ರವರೆಗೆ ವಸ್ತುನಂಗ್ರಹಾಲಯದಲ್ಲಿ ಕೆಲಸ ಮಾಡುತ್ತಿದ್ದನು. ಆತನನ್ನು 21 ತಿಂಗಳ ಕಾಲ ಅಮಾನತುಗೊಳಿಸಿ, 60,600 ಯುರೋ (ಸುಮಾರು 52 ಲಕ್ಷ ರೂ.) ದಂಡವನ್ನೂ ವಿಧಿಸಲಾಗಿದೆ. ವರದಿಯ ಪ್ರಕಾರ, ಈತನಿಗೆ 30 ವರ್ಷ ವಯಸ್ಸಾಗಿದ್ದು, 'ದಾಸ್ ಮಾರ್ಚೆನ್ ಮೊಮ್ ಫ್ರೋಷ್ಕೋನಿಗ್' ಎಂಬ ಶೀರ್ಷಿಕೆಯ ಮೂಲ ವರ್ಣಚಿತ್ರವನ್ನು ಕದ್ದಿದ್ದಾನೆ. ಕಪ್ಪೆ ರಾಜಕುಮಾರನ ಕಥೆಯನ್ನು ಅದರಲ್ಲಿ ಹೇಳಲಾಗಿದೆ. ನಂತರ ಅದರ ಜಾಗದಲ್ಲಿ ನಕಲಿ ಪೇಂಟಿಂಗ್ ಹಾಕಿದ್ದನು. ಕೊನೆಗೆ ರಹಸ್ಯವಾಗಿ ಮೂಲ ವರ್ಣಚಿತ್ರವನ್ನು ಹರಾಜು ಹಾಕಿದ್ದಾನೆ.
ಮ್ಯೂಸಿಯಂನಿಂದ ಪೇಂಟಿಂಗ್ ಅನ್ನು ಕದ್ದ ಮೇಲೆ ವ್ಯಕ್ತಿ ಹರಾಜಿಗೆ ಕೊಟ್ಟನು. ಹರಾಜಿಗೆ ಕೊಡುವಾಗ ತಮ್ಮ ಅಜ್ಜಿಯರ ಕಾಲದಿಂದಲೂ ಇದನ್ನು ಹೊಂದಿರುವುದಾಗಿ ಹೇಳಿದ. ನಂತರ ಈ ಮೂಲ ವರ್ಣಚಿತ್ರವನ್ನು 70,000 ಯುರೋಗಳಿಗೆ (ಸುಮಾರು 61 ಲಕ್ಷ ರೂ.) ಮಾರಾಟ ಮಾಡಿದನು. ಇದರಿಂದ ವ್ಯಕ್ತಿಗೆ 50,000 ಯೂರೋ (ಸುಮಾರು 42 ಲಕ್ಷ ರೂ.) ಸಿಕ್ಕಿದೆ. ಉಳಿದ ಹಣವನ್ನು ಹರಾಜು ಸಂಸ್ಥೆ ತನ್ನ ಶುಲ್ಕವಾಗಿ ಇಟ್ಟುಕೊಂಡಿತ್ತು. ಈ ಹಣದಲ್ಲಿ ಅವನು ದುಬಾರಿ ಕಾರುಗಳು ಮತ್ತು ವಾಚ್‌ಗಳನ್ನು ಖರೀದಿಸಿದರು. ಅಷ್ಟೇ ಅಲ್ಲ, ಅವನ ಸಾಲವನ್ನೆಲ್ಲ ತೀರಿಸಿದನು.
ಸಾಮಾನ್ಯ ನೌಕರನ ಬಳಿ ರೋಲ್ಸ್ ರಾಯ್ಸ್ ಕಾರನ್ನು ಜನರು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಆ ವ್ಯಕ್ತಿ ನಾಚಿಕೆಯಿಲ್ಲದೆ ಶೇಖರಣಾ ಕೊರಡಿಯ ಪ್ರವೇಶದ ಲಾಭವನ್ನು ಪಡೆದಿದ್ದಾನೆ ಎಂದು ನ್ಯಾಯಾಲಯ ಹೇಳಿದೆ. ಅವನು ಇದನ್ನು ನೋಡಿಕೊಳ್ಳುವ ಬದಲು ಕದ್ದನು. ಈ ದುಬಾರಿ ಪೇಂಟಿಂಗ್ ಜತೆಗೆ ಇನ್ನೂ ಮೂರು ಪೇಂಟಿಂಗ್ ಗಳನ್ನು ಕದ್ದಿದ್ದಾನೆ. ಅವನು ಇವುಗಳಲ್ಲಿ ಎರಡನ್ನು ಮಾರಾಟ ಮಾಡಿದನು. ಮೂರನೆಯದನ್ನು ಮಾರುವ ಮೊದಲೇ ಸಿಕ್ಕಿಬಿದ್ದ.