ನ್ಯೂಸ್

ಅವಳಿ ನವಜಾತ ಶಿಶುಗಳ ಹತ್ಯೆ​; AI ಸಹಾಯದಿಂದ 19 ವರ್ಷಗಳ ಪ್ರಕರಣ ಭೇದಿಸಿದ ಪೊಲೀಸರು!

ಕೇರಳ: ಕೃತಕ ಬುದ್ದಿಮತ್ತೆ (Artificial Intelligence)(AI) ಸಹಾಯದಿಂದ 19 ವರ್ಷದ ಬಳಿಕ ಕೊಲೆ ಪ್ರಕರಣವೊಂದನ್ನು ಕೇರಳ ಪೊಲೀಸರು ಭೇದಿಸಿದ್ದಾರೆ.

ಹೌದು, 2016ರಲ್ಲಿ ಅವಳಿ ನವಜಾತು ಶಿಶುಗಳ ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಇದೀಗ ಅರೆಸ್ಟ್​ ಮಾಡಿ ಜೈಲಿಗಟ್ಟಿದ್ದಾರೆ.

ಪ್ರಕರಣ ಹಿನ್ನೆಲೆ..

2006ರ ಫೆಬ್ರವರಿ 10ರಂದು ಕೇರಳದ ಕೊಲ್ಲಂ ಜಿಲ್ಲೆಯ ಆಂಚಲ್ ಎಂಬ ಪಟ್ಟಣದಲ್ಲಿ, ಶಾಂತಮ್ಮ ಎಂಬ ಮಹಿಳೆ ಪಂಚಾಯತ್ ಕಚೇರಿಯಿಂದ ಮನೆಗೆ ಹಿಂದಿರುಗಿದ್ದಾರೆ. ಮನೆಗೆ ಬಂದ ಬಳಿಕ, ಮನೆಯಲ್ಲಿ ಆಕೆಯ ಮಗಳ ರಂಜಿನಿಯ 17 ದಿನದ ನವಜಾತು ಶಿಶುಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದ್ದಾರೆ. ಭಯಗೊಂಡ ಮಹಿಳೆ ಬಳಿಕ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾಳೆ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ವಿಫಲರಾಗಿದ್ದಾರೆ.

ಪ್ರಕರಣ ಭೇದಿಸಿದ್ದು ಹೇಗೆ?

ಇತ್ತೀಚಿಗೆ ಕೇರಳ ಪೊಲೀಸರ ತಾಂತ್ರಿಕ ಗುಪ್ತಚರ ವಿಭಾಗವು ಹಳೆಯ ಪ್ರಕರಣಗಳನ್ನು ಮರು ಪರಿಶೀಲಿಸಲು ಕೃತಕ ಬುದ್ಧಿಮತ್ತೆಯ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳ ಹಳೆಯ ಛಾಯಾಚಿತ್ರಗಳನ್ನು ಬಳಸಿ, 19 ವರ್ಷಗಳ ನಂತರ ಅವರು ಹೇಗೆ ಕಾಣುತ್ತಾರೆ ಎಂಬ ಅಂದಾಜು ಮಾಡಲಾಗಿದೆ. ಬಳಿಕ ಈ ಎಐ ಫೋಟೊವನ್ನು ಫೇಸ್​ಬುಕ್​​ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ.

ಒಬ್ಬ ಆರೋಪಿಯ ಎಐ-ರಚಿಸಿದ ಚಿತ್ರವು ಫೇಸ್‌ಬುಕ್‌ನಲ್ಲಿ ಆರೋಪಿ ಹಂಚಿಕೊಂಡ ಮದುವೆಯ ಫೋಟೋದೊಂದಿಗೆ 90% ಹೊಂದಾಣಿಕೆಯನ್ನು ತೋರಿಸಿದೆ. ಆರೋಪಿ ರಾಜೇಶ್​ ಎಂದು ಗುರತಿಸಲಾಗಿದೆ. ತ್ವರಿತಗತಿಯಲ್ಲಿ ಪತ್ತೆಹಚ್ಚಿ ಬಂಧಿಸಿದ ಪೊಲೀಸರು ಬಳಿಕ ಇತನ ಸಹಾಯದಿಂದ ಮತ್ತೊಬ್ಬ ಆರೋಪಿ ದಿವಿಲ್​ ನನ್ನು ಪತ್ತೆ ಮಾಡಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಂತಮ್ಮನ ಪುತ್ರಿ ರಂಜಿನಿ ಜತೆಗೆ ಆರೋಪಿ ದಿವಿಲ್​ ಸಂಬಂಧವಿತ್ತು. ಇಬ್ಬರ ನಡುವೆ ದೈಹಿಕ ಸಂಪರ್ಕಕವಾಗಿದೆ. ಆರೋಪಿ ದಿವಿಲ್​ ರಂಜಿನಿಗೆ ಗರ್ಭಧರಿಸಂತೆ ವಾರ್ನಿಂಗ್​ ಮಾಡಿದ್ದ. ಆದದರೆ, ರಂಜಿನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಇದರಿಂದ ಕುಪಿತಗೊಂಡ ಆರೋಪಿ ದಿವಿಲ್​ ಸಹಚರ ರಾಜೇಶ್​ ಜತೆಗೂಡಿ ಕೊಲೆ ಮಾಡಿ ಪರಾರಿಯಾಗಿದ್ದರು.(ಏಜೆನ್ಸೀಸ್​)