ನ್ಯೂಸ್

ತೃತೀಯ ಲಿಂಗಿಯ ಹತ್ಯೆ; ಮಹಿಳೆ ಸೆರೆ

ಬೆಂಗಳೂರು: ಚೀಟಿ ಹಣದ ವಿಚಾರಕ್ಕೆ ತೃತೀಯ ಲಿಂಗಿಯ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಜೀವನ್‌ಬಿಮಾನಗರ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅಯ್ಯರಹಳ್ಳಿ ನಿವಾಸಿ ಪ್ರೇಮಾ (51) ಬಂಧಿತೆ. ಕಳೆದ ಏ. 26ರ ರಾತ್ರಿ ತೃತೀಯ ಲಿಂಗಿ ಮಂಜ ನಾಯ್ಕ ಅಲಿಯಾಸ್ ಮಂಜಿಬಾಯಿ (42) ಎಂಬಾಕೆಯನ್ನು ಕೊಲೆ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

20 ವರ್ಷಗಳ ಹಿಂದೆ ಪ್ರೇಮಾ ಪತಿ ಅಸುನೀಗಿದ್ದರು. ನಂತರ ನೆಲಮಂಗಲದಲ್ಲಿ ಬಂಡೆ ಕೆಲಸ ಮಾಡುವಾಗ ಪ್ರೇಮಾಗೆ ತೃತೀಯ ಲಿಂಗಿ ಪರಿಚಯವಾಗಿ ಒಟ್ಟಿಗೆ ವಾಸವಾಗಿದ್ದರು. ಎರಡು ವರ್ಷಗಳ ಹಿಂದೆ ಇಬ್ಬರೂ ಮುರುಗೇಶ್‌ಪಾಳ್ಯದ ಶ್ರೀರಾಮನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಏ. 26ರ ರಾತ್ರಿ ಚೀಟಿಗೆ ಹಣ ಕಟ್ಟುವ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಕೆರಳಿದ ತೃತೀಯ ಲಿಂಗಿ ಚಾಕುವಿನಿಂದ ಪ್ರೇಮಾ ಮೇಲೆ ಹಲ್ಲೆಗೆ ಮುಂದಾಗಿದ್ದಳು. ಪ್ರತಿರೋಧ ವ್ಯಕ್ತಪಡಿಸಿದ ಪ್ರೇಮಾ, ಟವೆಲ್‌ನಿಂದ ತೃತೀಯ ಲಿಂಗಿಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಳು. ಎರಡು ದಿನಗಳ ಬಳಿಕ ತೃತೀಯ ಲಿಂಗಿಯ ಸಹೋದರ ಮನೆಗೆ ಬಂದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಬಗ್ಗೆ ಸಹೋದರ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದ.

ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಕೊಲೆ ಎಂಬುದು ದೃಢವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತೃತೀಯ ಲಿಂಗಿ ವಾಸವಾಗಿದ್ದ ಮನೆಯ ಅಕ್ಕಪಕ್ಕ ವಿಚಾರಣೆ ಮಾಡಿದಾಗ ಪ್ರೇಮಾ ಬಗ್ಗೆ ಮಾಹಿತಿ ಕಲೆ ಹಾಕಿ ಚನ್ನರಾಯಪಟ್ಟಣದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾ