ನ್ಯೂಸ್

ಅಜ್ಜನ ಸಾವಿನ ಪೋಸ್ಟ್​ಗೆ ನಗುವ ಎಮೋಜಿ; ಪ್ರಶ್ನೆ ಮಾಡಿದ್ದಕ್ಕೆ ಚಾಕು ಇರಿದು ಕೊಲೆ: ಓರ್ವನ ಬಂಧನ| murder

ಗುಜರಾತ್‌; ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ್ದ ಪೋಸ್ಟ್​ಗೆ ಪ್ರತಿಕ್ರಿಯೆಯಾಗಿ ನಗುವ ಎಮೋಜಿ ಕಳುಹಿಸಿದ ಕಾರಣಕ್ಕೆ 20 ವರ್ಷದ ಯುವಕನನ್ನು ಚಾಕುವಿನಲ್ಲಿ ಇರಿದು ಕೊಂದ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

ಪ್ರಿನ್ಸ್ ಮಾಡಿದ್ದ ಫೇಸ್‌ಬುಕ್ ಪೋಸ್ಟ್‌ಗೆ ಬಿಪಿನ್ ನಗುವ ಎಮೋಜಿಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾನೆ. ಇನ್ನೂ ಈತನ ಕಮೆಂಟ್​ಗೆ ಪ್ರಿನ್ಸ್ ಕೋಪಗೊಂಡು ಬಿಪಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ. ನಂತರ ಇವರಿಬ್ಬರ ವಾಕ್ಸಮರ ವಿಕೋಪಕ್ಕೆ ತಿರುಗಿದ್ದು, ಇಬ್ಬರೂ ಕೂಡ ಒಬ್ಬರನ್ನೊಬ್ಬರು ಥಳಿಸಿಕೊಂಡಿದ್ದಾರೆ.

ಬಿಪಿನ್ ಕುಮಾರ್ ರಾಜಿಂದರ್ ಗೊಂಡ್ ಎಂಬಾತ ಪ್ರಿನ್ಸ್ ಕುಮಾರ್ ಎಂಬ ಬಲಿಪಶುವನ್ನು ಜಾಚುವಿನಿಂದ ಇರಿದಿದ್ದಾನೆ. ಹತ್ಯೆಗೊಳಗಾದ ಪ್ರಿನ್ಸ್ ಬಿಹಾರದವರಾಗಿದ್ದು, ಗುಜರಾತ್‌ನ ಕಾರ್ಖಾನೆಯಲ್ಲಿ ತಮ್ಮ ಮೂವರು ಸೋದರಸಂಬಂಧಿಗಳೊಂದಿಗೆ ಕೆಲಸ ಮಾಡುತ್ತಿದ್ದರು. ಆತ ನಾಲ್ಕು ತಿಂಗಳ ಹಿಂದೆ ನಿಧನರಾದ ತಮ್ಮ ದಿವಂಗತ ಅಜ್ಜ ರೂಪನಾರಾಯಣ್ ಭಿಂಡ್ ಅವರ ಕುರಿತು ಪೋಸ್ಟ್​ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಿನ್ಸ್ ತಮ್ಮ ಅಜ್ಜನ ಸ್ಮರಣಾರ್ಥಕ್ಕಾಗಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.

(ಏಜೆನ್ಸೀಸ್)

ಈ ಸಂದರ್ಭದಲ್ಲಿ ಪ್ರಿನ್ಸ್ ಕಾರ್ಖಾನೆಯಿಂದ ಕೆಲಸ ಮುಗಿಸಿ ಬರುತ್ತಿದ್ದಾಗ, ಬ್ರಿಜೇಶ್ ಗೊಂಡ್ ಎಂದು ಗುರುತಿಸಲಾದ ಮತ್ತೊಬ್ಬ ವ್ಯಕ್ತಿ ಆತನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇವರಿಬ್ಬರ ಮಧ್ಯೆ ಘರ್ಷಣೆ ಮುಂದುವರೆದಂತೆ ಅಲ್ಲೇ ಇದ್ದ ಬಿಪಿನ್ ಚಾಕುವಿನಿಂದ ಪ್ರಿನ್ಸ್‌ಗೆ ಇರಿದಿದ್ದಾನೆ. ಇನ್ನೂ ಅಲ್ಲೇ ಇದ್ದ ಇತರ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿ, ಆತನನ್ನು ಚಿಕಿತ್ಸೆಗಾಗಿ ಅಲ್ಲೇ ಇದ್ದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರಿಗೆ ಪ್ರಜ್ಞೆಯಲ್ಲಿದ್ದ ಪ್ರಿನ್ಸ್ ಘಟನೆ ಬಗ್ಗೆ ಸ್ವತಃ ಹೇಳಿಕೆ ನೀಡಿದ್ದಾನೆ. ಇದಾದ ಕಳೆದ ನಾಲ್ಕು ದಿನಗಳ ಬಳಿಕ ಪ್ರಿನ್ಸ್ ನಿಧನಹೊಂದಿದ್ದಾರೆ. ಸೋಮವಾರ ರಾತ್ರಿ ಬಿಪಿನ್​​ನನ್ನು ಪೊಲೀಸರು ಬಂಧಿಸಿ, ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೂ ಘಟನೆಯ ಮತ್ತೊಬ್ಬ ಆರೋಪಿ ಬ್ರಿಜೇಶ್ ಗೊಂಡ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.