ಹೇಮಂತ್ ಮೋದಿ 
ನ್ಯೂಸ್

Hemanth Modi - 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಿಲಾಡಿ ನಟನ ಬಂಧನ

Hemanth Modi -
ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸಲು ಸಿನಿಮಾಗಳಲ್ಲಿ ಸಾಲು ಟ್ವಿಸ್ಟ್​ಗಳನ್ನು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ನಟನ ಜೀವನದಲ್ಲಿ ಎಂತಹ ಸಿನಿಮಾನೂ ಮೀರಿಸುವಷ್ಟು ಟ್ವಿಸ್ಟ್​ಗಳಿವೆ. ಕೊಲೆ ಆರೋಪದಲ್ಲಿ ಜೈಲು ಸೇರಿ, ಪೆರೋಲ್​ ಮೇಲೆ ಬಿಡುಗಡೆಯಾಗಿ 12 ವರ್ಷ ತಲೆಮರೆಸಿಕೊಂಡು ಬಾಲಿವುಡ್​ನಲ್ಲಿ ಮಿಂಚುತ್ತಿದ್ದ ಆರೋಪಿಯನ್ನು ಇತ್ತೀಚೆಗಷ್ಟೆ ಗುಜರಾತ್​ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, 2005ರಲ್ಲಿ ಅಹಮದಾಬಾದ್​ನ ನರೋಡಾದಲ್ಲಿ ನಡೆದ ಗುಂಪು ಗಲಾಟೆಯಲ್ಲಿ ಒಬ್ಬ ವ್ಯಕ್ತಿಯ ಹತ್ಯೆಯಾಗಿತ್ತು. ಆರೋಪಿ ಹೇಮಂತ್​ ವೈಷ್ಣವ್​ ಬಂಧನವಾಗಿ, 2008ರಲ್ಲಿ ಆತನಿಗೆ ಜೀವಾವಧಿ ಶಿೆ ವಿಧಿಸಲಾಗಿತ್ತು. ಆದರೆ, 2014ರ ಜುಲೈನಲ್ಲಿ 30 ದಿನಗಳ ಪೆರೋಲ್​ ಮೇಲೆ ಬಿಡುಗಡೆಯಾಗಿದ್ದ ಹೇಮಂತ್​, ಮತ್ತೆ ಜೈಲಿಗೆ ಹೋಗದೇ ತಲೆಮರೆಸಿಕೊಂಡಿದ್ದ. ಟ್ವಿಂಕಲ್​ ದಾವೆ, ಸ್ಪಂದನ್​ ಮೋದಿ ಅಂತೆಲ್ಲ ಹೆಸರು ಬದಲಿಸಿಕೊಂಡು ಮುಂಬೈಗೆ ಬಂದ ಹೇಮಂತ್​, ಇಲ್ಲಿ ಸಿನಿಮಾ, ಸೀರಿಯಲ್​, ರಂಗಭೂಮಿ ಅಂತ ಹೊಸ ಕರಿಯರ್​ ಪ್ರಾರಂಭಿಸಿದ್ದ. ಕ್ರಮೇಣ ಪ್ರತಿಭೆಯ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳತೊಡಗಿದ ಆತ ಆಮಿರ್​ ಖಾನ್​, ಅಮಿತಾಭ್​ ಬಚ್ಚನ್​ರಂತಹ ದಿಗ್ಗಜರ ಜತೆ "ಥಗ್ಸ್​ ಆಫ್​ ಹಿಂದೂಸ್ತಾನ್​', ರಣವೀರ್​ ಸಿಂಗ್​ ಜತೆ "ಜಯೇಶ್​ಭಾಯ್​ ಜೋರ್​ದಾರ್​' ಚಿತ್ರಗಳಲ್ಲಿ ಮಿಂಚಿದ್ದ. ಜತೆಗೆ ಆಗಾಗ ಗುಜರಾತಿ ಚಿತ್ರಗಳಲ್ಲೂ ನಟಿಸುತ್ತಿದ್ದ ಹೇಮಂತ್​, ಮುಂಬೈ & ಗುಜರಾತ್​ ನಡುವೆ ಓಡಾಡಿಕೊಂಡಿದ್ದ. 17 ನಾಟಕಗಳು, 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹೇಮಂತ್​, ಕಳೆದ ವರ್ಷ ಗುಜರಾತ್​ಗೆ ಶ್ಟ್​ಿ ಆಗಿದ್ದ. &ಏಜೆನ್ಸೀಸ್​

ಸಿಕ್ಕಿಬಿದ್ದು ಹೇಗೆ?

ಹೇಮಂತ್​ ಪೆರೋಲ್​ ಮೇಲೆ ಹೊರಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿರಲಿಲ್ಲ. ಹಾಗೇ ಮೊಬೈಲ್​ ಕೂಡ ಬಳಸುತ್ತಿರಲಿಲ್ಲ. ಇನ್ನು ಪದೇ ಪದೆ ಹೆಸರು ಬದಲಿಸಿಕೊಂಡಿದ್ದ. ಇನ್ನು ಸ್ನೇಹಿತರು, ಸಂಬಂಧಿಕರ ಜತೆಗೂ ಹೆಚ್ಚು ಒಡನಾಟವಿರಲಿಲ್ಲ. ಇದ್ದ ಕೆಲವರು ಆತ ತಲೆಮರೆಸಿಕೊಂಡಿರುವ ವಿಷಯವನ್ನು ಪೊಲೀಸರಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ಆದರೆ, ಕಳೆದ ವರ್ಷ ಅಹಮದಾಬದ್​ಗೆ ಶಿಫ್ಟ್​ ಆದ ಆತನ ಬಗ್ಗೆ, ಬಾತ್ಮೀದಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಘೀಕಾಂತ ಮೆಟ್ರೋ ನಿಲ್ದಾಣದಲ್ಲಿ ಹೇಮಂತ್​ನ ಬಂಧಿಸಿದ್ದಾರೆ. ಉಳಿದ ಜೈಲುಶಿಕ್ಷೆಯನ್ನು ಪೂರ್ಣಗೊಳಿಸಲು ಆತನನ್ನು ಮೆಹ್ಸಾನಾ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.