ನ್ಯೂಸ್

ಕೊಲೆ ಆರೋಪಿಯಿಂದ ಜಡ್ಜ್​ ಮೇಲೆ ಚಪ್ಪಲಿ ಎಸೆತ: ಭದ್ರತಾ ಲೋಪ ಹಿನ್ನೆಲೆ 11 ಪೊಲೀಸರು ಅಮಾನತು

ಮಹಾರಾಷ್ಟ್ರ: ಕೊಲೆ ಆರೋಪಿಯೊಬ್ಬ ಕೋರ್ಟ್​ ಹಾಲ್​ನಲ್ಲಿ ಜಡ್ಜ್​ಗೆ ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭದ್ರತಾಲೋಪ ಹಿನ್ನೆಲೆಯಲ್ಲಿ 11 ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಥಾಣೆ ಸೆಷನ್​ ನ್ಯಾಯಾಲಯದಲ್ಲಿ 22 ವರ್ಷದ ಕಿರಣ್​ ಸಂತೋಷ್​ ಭರಮ್​ ಎಂಬ ಕೊಲೆ ಆರೋಪಿ ವಿಚಾರಣೆ ಹಾಜರಾದಗಾದ ಈ ಘಟನೆ ನಡೆದಿದೆ.

ಆರೋಪಿ ಭರಮ್​ ತನ್ನ ವಿಚಾರಣೆಯ ಕೇಸ್​ ಅನ್ನು ಮೊತ್ತೊಂದು ನ್ಯಾಯಾಲಯಕ್ಕೆ ವರ್ಗಾಹಿಸುವಂತೆ ಕೋರಿದ್ದಾನೆ. ಇದಕ್ಕೆ ನಿಮ್ಮ ವಕೀಲರು ಅರ್ಜಿ ಸಲ್ಲಿಸುಂತೆ ನ್ಯಾಯಾಧೀಶರು ಹೇಳಿದ್ದಾರೆ. ಭರಮ್​ ಪರ ಇರುವ ವಕೀಲರನ್ನು ಕರೆಯಲಾಗಿದೆ. ಆದರೆ, ವಕೀಲರು ಗೈರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದರಿಂದ ಕುಪಿಗೊಂಡ ಆರೋಪಿ ಭರಮ್​ ಏಕಾಏಕಿ ನ್ಯಾಯಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ.

ಆದರೆ, ಇತ ಏಸೆದ ಚಪ್ಪಲಿ ನ್ಯಾಯಧೀಶರ ಮುಂದೆ ಇದ್ದ ಬೆಂಚ್​ ಮೇಲೆ ಬಿದ್ದಿದೆ. ಹೀಗಾಗಿ, ಕರ್ತವ್ಯಲೋಪ ಸಾಬಿತಾದ ಹಿನ್ನೆಲೆ 11 ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​).