ನ್ಯೂಸ್

ಮುಂಬೈನಲ್ಲಿ ಅಕ್ರಮ ಫಿಲಂ ಸ್ಟುಡಿಯೋಗಳ ನೆಲಸಮ; ತನಿಖೆಗೆ ಆಗ್ರಹಿಸಿದ ಬಿಜೆಪಿ

ಮುಂಬೈ: ಮುಂಬೈನ ಮಲಾಡ್​ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 12ಕ್ಕೂ ಹೆಚ್ಚು ಫಿಲಂ ಸ್ಟುಡಿಯೋಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT) ಆದೇಶದ ಮೇರೆಗೆ ಶುಕ್ರವಾರ ನೆಲಸಮ ಮಾಡಲಾಗಿದೆ.

ಈ ಹಿಂದೆ ಇದ್ದ ಮಹಾ ವಿಕಾಸ್​ ಅಘಾಡಿ ನೇತೃತ್ವದ ಸರ್ಕಾರದ ಆಶ್ರಯದಲ್ಲಿ ಈ ಫಿಲಂ ಸ್ಟುಡಿಯೋಗಳನ್ನು ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.

ತನಿಖೆಗೆ ಆಗ್ರಹಿಸಿದ ಬಿಜೆಪಿ

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಕಿರೀಟ್​ ಸೋಮಯ್ಯ ಇಲ್ಲಿ ಸ್ಟುಡಿಯೋಗಳನ್ನು ಅಕ್ರಮ ದಾಖಲೆಗಳನ್ನು ಬಳಸಿ ನಿರ್ಮಿಸಲಾಗಿತ್ತು. ಇದರ ಬಗ್ಗೆ ಬಿಎಂಸಿ ಕಮಿಷನರ್​ ಇಕ್ಬಾಲ್​ ಚಹಲ್​ ಅವರಿಗೆ ತಿಳಿದಿದ್ದರೂ ಸಹ ಯಾವುಧೇ ಕ್ರಮವನ್ನು ಜರುಗಿಸಲಿಲ್ಲ.

ಅಕ್ರಮವನ್ನು ಪ್ರಶ್ನಿಸಿ ನಾವು ನ್ಯಾಯಾಲಯದ ಮೊರೆ ಹೋದೆವು ಮತ್ತು ಈ ವಿಚಾರವಾಗಿ ಸರ್ಕಾರ ಈ ಕೂಡಲ್ಲೇ ತನಿಖೆಗೆ ಆದೇಶಿಸಬೇಕು ಎಂದು ನಾನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಕೋರುತ್ತೇನೆ ಎಂದು ಕಿರೀಟ್​ ಸೋಮಯ್ಯ ಹೇಳಿದ್ದಾರೆ.