ಮುಂಬೈ: ಉನ್ನತಾಧಿಕಾರಿ ಸ್ತರದ ಉದ್ಯೋಗಕ್ಕೆ ಗರಿಷ್ಠ ಸರಾಸರಿ ವೇತನ (ವಾರ್ಷಿಕ 35.7 ಲಕ್ಷ ರೂ.) ಒದಗಿಸುವ ಮಹಾನಗರಗಳ ಪೈಕಿ ಮುಂಬೈ, ಮಧ್ಯಮ ಸ್ತರ (ವಾರ್ಷಿಕ 18.10 ಲಕ್ಷ ರೂ.)ಮತ್ತು ಜ್ಯೂನಿಯರ್ ಸ್ತರ (ವಾರ್ಷಿಕ 6.70 ಲಕ್ಷ ರೂ.)ದ ಉದ್ಯೋಗಕ್ಕೆ ಹೆಚ್ಚಿನ ಸರಾಸರಿ ವೇತನ ಒದಗಿಸುವ ಮಹಾನಗರಗಳ ಪೈಕಿ ಬೆಂಗಳೂರು ನಂ.1 ಸ್ಥಾನದಲ್ಲಿವೆ. ರ್ಯಾಂಡ್ಸ್ಟಾ್ಯಡ್ನ ‘2021 ಆನುವಲ್ ಸ್ಯಾಲರಿ ಟ್ರೆಂಡ್ಸ್ ರಿಪೋರ್ಟ್’ನಲ್ಲಿ ಈ ಅಂಶಗಳು ಉಲ್ಲೇಖವಾಗಿವೆ.
ನ್ಯಾಷನಲ್ ಕ್ಯಾಪಿಟಲ್ ರೀಜಿಯನ್ (ಎನ್ಸಿಆರ್) ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಉನ್ನತಾಧಿಕಾರಿ ಸ್ತರದ ಉದ್ಯೋಗಕ್ಕೆ ಇಲ್ಲಿ ವಾರ್ಷಿಕ ಸರಾಸರಿ 32.70 ಲಕ್ಷ ರೂ. ವೇತನ ಇದೆ. ಮಧ್ಯಮ ಮತ್ತು ಜ್ಯೂನಿಯರ್ ಸ್ತರದ ಉದ್ಯೋಗಗಳ ವೇತನ ವಿಚಾರದಲ್ಲಿ ಎನ್ಸಿಆರ್ ಅನುಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದೆ. ಜ್ಯೂನಿಯರ್ ಸ್ತರದ ಉದ್ಯೋಗಗಳ ವೇತನದ ಪಟ್ಟಿಯಲ್ಲಿ ಚೆನ್ನೈ (ವಾರ್ಷಿಕ 5.6 ಲಕ್ಷ ರೂ.) ಮೂರನೇ ಸ್ಥಾನದಲ್ಲಿದೆ. ಬೆಂಗಳೂರಿನ ವೇತನಕ್ಕೆ ಹೋಲಿಸಿದರೆ ಶೇಕಡ 16 ಅಂತರವಿದೆ.
ಟೈರ್ 2 ನಗರಗಳ ಪೈಕಿ ಉನ್ನತಾಧಿಕಾರಿ ಸ್ತರದ ಉದ್ಯೋಗಗಳ ವೇತನ ಭುವನೇಶ್ವರದಲ್ಲೇ ಗರಿಷ್ಠ ಸರಾಸರಿ (ವಾರ್ಷಿಕ 31.2 ಲಕ್ಷ ರೂ.) ಮಟ್ಟದಲ್ಲಿ ಇದೆ. ಕೊಚ್ಚಿ (28.8 ಲಕ್ಷ ರೂ.), ಚಂಡೀಗಢ (26.5 ಲಕ್ಷ ರೂ.) ನಂತರದ ಸ್ಥಾನಗಳಲ್ಲಿವೆ.
ಬಿಎಫ್ಎಸ್ಐ ಟ್ರೆಂಡ್: ಬ್ಯಾಂಕಿಂಗ್, ಫೈನಾನ್ಶಿಯಲ್ ಸರ್ವೀಸಸ್ ಆಂಡ್ ಇನ್ಶೂರೆನ್ಸ್ (ಬಿಎಫ್ಎಸ್ಐ) ಸೆಕ್ಟರ್ನಲ್ಲಿ ಮಧ್ಯಮ ಸ್ತರ ಮತ್ತು ಉನ್ನತಾಧಿಕಾರಿ ಸ್ತರದ ಉದ್ಯೋಗಿಗಳಿಗೆ ಸರಾಸರಿ ಗರಿಷ್ಠ ವಾರ್ಷಿಕ ವೇತನ ಅಹಮದಾಬಾದ್ನಲ್ಲಿ ಅನುಕ್ರಮವಾಗಿ 8 ಲಕ್ಷ ರೂ. ಮತ್ತು 15.3 ಲಕ್ಷ ರೂ., ಕೋಲ್ಕತದಲ್ಲಿ 12.7 ಲಕ್ಷ ರೂ. ಮತ್ತು 27.3 ಲಕ್ಷ ರೂ., ಮುಂಬೈನಲ್ಲಿ 9.3 ಲಕ್ಷ ರೂ. ಮತ್ತು 19.3 ಲಕ್ಷ ರೂ., ಎನ್ಸಿಆರ್ನಲ್ಲಿ 8.7 ಲಕ್ಷ ರೂ. ಮತ್ತು 17 ಲಕ್ಷ ರೂ. ಇದೆ. ಈ ಪಟ್ಟಿಯಲ್ಲಿ ಭುವನೇಶ್ವರ ಅಗ್ರಸ್ಥಾನದಲ್ಲಿದ್ದು ಉನ್ನತಾಧಿಕಾರಿಗಳಿಗೆ ಸರಾಸರಿ 31.2 ಲಕ್ಷ ರೂ. ವೇತನವಿದೆ.