ನ್ಯೂಸ್

VIDEO: ಬಿಜೆಪಿ ಮುಖಂಡನ ಮನೆ ಮುಂದೆಯೇ ಸಿಕ್ತು ಹಣ, ಚಿನ್ನಾಭರಣ ತುಂಬಿದ ಬ್ಯಾಗ್​! ಸಿಸಿಟಿವಿ ದೃಶ್ಯಾವಳಿ ಹಿಂದೆ ಬಿದ್ದ ಪೊಲೀಸರು

ಮುಂಬೈ: ಭಾನುವಾರ ಬೆಳಗ್ಗೆ ಮನೆಯ ಬಾಗಿಲ ಮುಂದೆಯೇ ಚೀಲವೊಂದು ಪತ್ತೆಯಾಗಿದ್ದು, ಅದನ್ನು ತೆಗೆದು ನೋಡಿದ ಬಿಜೆಪಿ ಮುಖಂಡನಿಗೇ ಅಚ್ಚರಿ ಕಾದಿತ್ತು.

ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್​​ ಸದಸ್ಯರೂ ಆಗಿರುವ ಪ್ರಸಾದ್ ಲಾಡ್​ ಅವರ ಮನೆ ಮುಂದೆಯೇ ಬಿದ್ದಿದ್ದ ಬ್ಯಾಗ್ ಅನ್ನು ನೋಡಿದ ಮೊದಲು ಆತಂಕ ವ್ಯಕ್ತಪಡಿಸಿದ್ದಾರೆ. ಆ ನಂತರ ಪೊಲೀಸರಿಗೆ ಕರೆದು ಬ್ಯಾಗನ್ನು ತೆರೆದು ನೋಡಿದ್ದು, ನಗದು ಹಣ ಹಾಗೂ ಚಿನ್ನಾಭರಣ ಪತ್ತೆಯಾಗಿದೆ.

ಸ್ವತಃ ಪ್ರಸಾದ್​ ಲಾಡ್​​ ಅವರಿಗೇ ಅಚ್ಚರಿ ವ್ಯಕ್ತವಾಗಿದ್ದು, ಈ ಕೆಲಸ ಯಾರು ಮಾಡಿರಬಹುದು ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಈ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ.

ಚೀಲದಲ್ಲಿ ಹಣ, ಚಿನ್ನಾಭರಣ ಅಷ್ಟೇ ಅಲ್ಲದೇ ಗಣಪತಿ ಮೂರ್ತಿ ಕೂಡ ಸಿಕ್ಕಿದೆ. ಮೂರ್ನಾಲ್ಕು ಪ್ಲಾಸ್ಟಿಕ್​ ಚೀಲದಲ್ಲಿ ಇವು ಪತ್ತೆಯಾಗಿದೆ. ನೆಕ್ಲೆಸ್​, ಬಳೆ, ಕಿವಿಯೋಲೆ ಸೇರಿದಂತೆ ಎಲ್ಲಾ ಚಿನ್ನಾಭರಣಗಳು ಇದರಲ್ಲಿವೆ.

ಇದು ಕಳ್ಳತನ ಮಾಡಿ ಇಲ್ಲಿ ತಂದು ಇಟ್ಟಿರಬಹುದು ಎಂದೂ ಪೊಲೀಸರು ಶಂಕಿಸಿದ್ದಾರೆ. ಮುಂಜಾನೆ 5.30 ರಿಂದ 6.30ರ ವರೆಗೆ ಶಂಕಿತರು ಮನೆಯ ಆಸು ಪಾಸು ಓಡಾಡಿರುವುದು ಪತ್ತೆಯಾಗಿದ್ದು, ಅವರದ್ದೇ ಕೈವಾಡವಿರಬಹುದು ಎಂದು ಹೇಳಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್​)