ನ್ಯೂಸ್

VIDEO | 'ಫೋನ್ ಟ್ಯಾಪ್ ಮಾಡುತ್ತಲೇ ಇರಿ... ಬೇಕೆಂದರೆ ನನ್ನ ಫೋನನ್ನೇ ಕೊಡುತ್ತೇನೆ ': ವ್ಯಂಗ್ಯವಾಡಿದ ರಾಹುಲ್

ನವದೆಹಲಿ: ಶಶಿ ತರೂರ್, ರಾಘವ್ ಚಡ್ಡಾ, ಮಹುವಾ ಮೊಯಿತ್ರಾ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಫೋನ್ ಹ್ಯಾಕಿಂಗ್ ಬಗ್ಗೆ ಹೇಳಿಕೊಂಡಿದ್ದು, ಇದೀಗ ವಿಪಕ್ಷ ನಾಯಕರ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ನಮ್ಮ ಫೋನ್ ಟ್ಯಾಪ್ ಮಾಡುತ್ತಿರಿ, ನಾವು ಹೆದರುವುದಿಲ್ಲ'' ಎಂದು ತಿಳಿಸಿದ್ದಾರೆ.

ನನ್ನ ಫೋನ್ ಕೊಡುತ್ತೇನೆ 

"ನಾವು ಹೆದರುವುದಿಲ್ಲ ಎಂದು ಹೇಳಿರುವ ರಾಹುಲ್ ಗಾಂಧಿ, ನಿಮಗೆ ಬೇಕಾದಷ್ಟು ಫೋನ್ ಟ್ಯಾಪಿಂಗ್ ಮಾಡಬಹುದು, ಪರವಾಗಿಲ್ಲ. ನೀವು ನನ್ನ ಫೋನ್ ಬೇಕೆಂದು ಬಯಸಿದರೆ, ನಾನು ಅದನ್ನು ನಿಮಗೆ ನೀಡುತ್ತೇನೆ'' ಎಂದು ತಿಳಿಸಿದ್ದಾರೆ.

ವ್ಯಂಗ್ಯವಾಡಿದ ರಾಹುಲ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಗುರಿಯಾಗಿಸಿದ್ದಾರೆ. ಪ್ರಧಾನಿ ಮೋದಿಯವರ ಆತ್ಮ ಅದಾನಿಯಲ್ಲಿದೆ, ವಾಸ್ತವವೆಂದರೆ ರಾಜನು ರಾಜನಲ್ಲ, ಆದರೆ ಅಧಿಕಾರ ಬೇರೆಯವರ ಕೈಯಲ್ಲಿದೆ. ನಾವು ಅದಾನಿ ಬಗ್ಗೆ ಮಾತನಾಡಿದ ತಕ್ಷಣ ಅವರು ಗುಪ್ತಚರ ಸಂಸ್ಥೆ, ಬೇಹುಗಾರಿಕೆ, ಸಿಬಿಐ ಎಂದು ಬರುತ್ತಾರೆ. ಪ್ರಸ್ತುತ ಅದಾನಿ ನಂಬರ್-1, ಪ್ರಧಾನಿ ನಂಬರ್-2 ಮತ್ತು ಅಮಿತ್ ಶಾ ನಂಬರ್-3 ಸ್ಥಾನದಲ್ಲಿದ್ದಾರೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.

ಏನಿದು ವಿಷಯ?

ಅನೇಕ ವಿರೋಧ ಪಕ್ಷದ ನಾಯಕರು ತಮ್ಮ ಫೋನ್ ಹ್ಯಾಕಿಂಗ್ ಆಗಿರುವ ಬಗ್ಗೆ ಹೇಳಿಕೊಂಡಿದ್ದು, ಈ ನಿಟ್ಟಿನಲ್ಲಿ 'ಆ್ಯಪಲ್' ತನಗೆ ಎಚ್ಚರಿಕೆ ನೀಡಿದೆ ಎಂದು ಅವರು ಆರೋಪಿಸಿದ್ದಾರೆ. ಸಂದೇಶದಲ್ಲಿ ಅವರು ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.