ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 10ನೇ ಹಾಗೂ ಉದ್ಯಮಿ ಗೌತಮ್ ಅದಾನಿ ಜಾಗತಿಕವಾಗಿ 11ನೇ ಅತಿ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್ ಪತ್ರಿಕೆಯ 2022ನೇ ಸಾಲಿನ ವಾರ್ಷಿಕ ಸಿರಿವಂತರ ಪಟ್ಟಿಯಲ್ಲಿ ಸ್ಪೇಸ್ಎಕ್ಸ್ ಹಾಗೂ ಟೆಸ್ಲಾ ಸಿಇಒ ಎಲನ್ ಮಸ್ಕ್ ಮೊದಲ ಸ್ಥಾನ ಆಕ್ರಮಿಸಿದ್ದು, ಅಮೆಜಾನ್ ಮುಖ್ಯಸ್ಥ ಜೆಫ್ ಬಿಜೋಸ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
- ಫೋರ್ಬ್ಸ್ನ 36ನೇ ವಾರ್ಷಿಕ ಶ್ರೀಮಂತರ ಪಟ್ಟಿಯಲ್ಲಿ 2,668 ಶತಕೋಟ್ಯಧಿಪತಿಗಳಿದ್ದಾರೆ.
- ಅತಿ ಶ್ರೀಮಂತರ ಸಂಖ್ಯೆಯಲ್ಲಿ ಕಳೆದ ವರ್ಷಕ್ಕಿಂತ 87 ಕಡಿಮೆಯಾಗಿದೆ.
- ಕರೊನಾ ಸಾಂಕ್ರಾಮಿಕ, ಯುದ್ಧ ಮತ್ತು ಮಂದ ಮಾರುಕಟ್ಟೆಗಳಿಂದಾಗಿ ಅತಿ ಸಿರಿವಂತರ ಮೇಲೆಯೂ ಕೆಟ್ಟ ಪರಿಣಾಮ ಬೀರಿದೆ ಎಂದು ವಾಣಿಜ್ಯ ಪತ್ರಿಕೆ ಫೋರ್ಬ್ಸ್ ಹೇಳಿದೆ.
- ಶತಕೋಟ್ಯಧೀಶರ ಪೈಕಿ 1,000 ಜನರು ಕಳೆದ ವರ್ಷಕ್ಕಿಂತ ಹೆಚ್ಚು ಶ್ರೀಮಂತರಾಗಿದ್ದಾರೆ.
- ಅಮೆರಿಕದಲ್ಲಿ ಅತಿ ಹೆಚ್ಚು, ಅಂದರೆ 735 ಕುಬೇರರಿದ್ದು, ಅವರ ಸಂಪತ್ತಿನ ಒಟ್ಟು ಮೌಲ್ಯ 4.70 ಟ್ರಿಲಿಯನ್ ಡಾಲರ್.
- ವಾರ್ಷಿಕ ಆಗರ್ಭ ಶ್ರೀಮಂತರ ಪಟ್ಟಿಗೆ 236 ಹೊಸಬರ ಸೇರ್ಪಡೆಯಾಗಿದೆ.
- ರಷ್ಯಾ ಮತ್ತು ಚೀನಾದಲ್ಲಿ ಶ್ರೀಮಂತರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗಿದೆ.
- 2022ರ ಮಾರ್ಚ್ 11ರ ಷೇರು ದರಗಳು ಹಾಗೂ ವಿನಿಮಯ ದರಗಳನ್ನು ಬಳಸಿ ಶ್ರೀಮಂತಿಕೆಯನ್ನು ಲೆಕ್ಕ ಹಾಕಲಾಗಿದೆ.