ಮುಂಬೈ: ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಏಕತೆ ಪ್ರದರ್ಶಿಸುವ ಸಲುವಾಗಿ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಇಡೀ ದೇಶವೇ ಸ್ಪಂದಿಸಿತು.
ಭಾರತದ ನಂ.1 ಹಾಗೂ ವಿಶ್ವದ ನಂ.2 ಅತಿಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿರುವ ರಿಲಯನ್ಸ್ ಸಾಮ್ರಾಜ್ಯದ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಜತೆಗೂಡಿ ಭಾನುವಾರ ರಾತ್ರಿ ದೀಪ ಬೆಳಗುವ ಮೂಲಕ ದೇಶದ ಜತೆ ತಾವಿದ್ದೇವೆ ಎಂಬ ಸಂದೇಶ ಸಾರಿದರು.
ಮುಂಬೈನಲ್ಲಿರುವ ತಮ್ಮ ನಿವಾಸ ಆಂಟಿಲ್ಯಾದ ಮೇಲ್ಛಾವಣಿಯಲ್ಲಿ ದಂಪತಿ ದೀಪ ಬೆಳಗಿಸಿದ್ದು ವಿಶೇಷವಾಗಿತ್ತು.