ನ್ಯೂಸ್

ಅನಂತ್ ಅಂಬಾನಿಗಾಗಿ ದುಬೈಯಲ್ಲಿ640 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ ಮುಖೇಶ್ ಅಂಬಾನಿ

ಮುಂಬೈ:  ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿಗಾಗಿ ದುಬೈಯಲ್ಲಿ 640 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ.

ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿಗಾಗಿ ದುಬೈಯ ಬೀಚ್ ಪಕ್ಕದಲ್ಲಿ 640 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಇತ್ತೀಚೆಗೆ ಖರೀದಿಸಿದ್ದಾರೆ. ಇದು ದುಬೈಯಲ್ಲಿನ ಅತೀ ಹೆಚ್ಚು ಮೌಲ್ಯದ ಮನೆ ಖರೀದಿ ಒಪ್ಪಂದವಾಗಿದೆ ಎಂದು ಹೇಳಲಾಗಿದೆ. ಪಾಮ್ ಜುಮೆರಹಾ ಸಮೀಪದಲ್ಲಿಈ ಆಸ್ತಿಯನ್ನು ಈ ವರ್ಷದ ಪ್ರಾರಂಭದಲ್ಲಿ ಅನಂತ್ ಅಂಬಾನಿಗೋಸ್ಕರ ಖರೀದಿಸಲಾಗಿದೆ.

ಈ ಬೀಚ್ ಬದಿಯ ವಿಲ್ಲಾಗಳು ತಾಳೆ ಮರದ ಆಕೃತಿಯಲ್ಲಿರುವ ಕೃತಕ ದ್ವೀಪಸಮೂಹದ ಉತ್ತರ ಭಾಗದಲ್ಲಿವೆ. ಈ ವಿಲ್ಲಾಗಳು ಒಳಾಂಗಣ ವಿನ್ಯಾಸದೊಂದಿಗೆ ಸುಸರ್ಜ್ಜಿತವಾಗಿವೆ. ಈ ಬಂಗಲೆಯಲ್ಲಿ 10 ಬೆಡ್ ರೂಮ್ ಗಳು, ಒಂದು ಖಾಸಗಿ ಸ್ಪಾ, ಒಳಾಂಗಣ ಹಾಗೂ ಹೊರಾಂಗಣ ಪೂಲ್ ಗಳಿವೆ.
ಅಂಬಾನಿ ಖರೀದಿಸಿರುವ ಮನೆಯಿರುವ ಆವರಣದಲ್ಲೇ ಬ್ರಿಟಿಷ್ ಫೂಟ್ ಬಾಲ್ ಆಟಗಾರ ಡೆವಿಡ್ ಬೆಕ್ಯಾಮ್ ಮತ್ತವರ ಪತ್ನಿ ವಿಕ್ಟೋರಿಯಾ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಮನೆಗಳಿವೆ. ಹೀಗಾಗಿ ದುಬೈಯಲ್ಲಿ ಶಾರೂಕ್ ಖಾನ್ ಹಾಗೂ ಅಂಬಾನಿ ನೆರೆಹೊರೆಯವರಾಗಿದ್ದಾರೆ.