ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರು ಪತ್ನಿ ನೀತಾ ಅಂಬಾನಿ ಅವರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ದುಬಾರಿ ಬೆಲೆ ಬಾಳುವ ಕಾರ್ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ ಚರ್ಚೆಯಾಗುತ್ತಿದೆ.
ಮುಕೇಶ್ ಅಂಬಾನಿ ಅವರ ಬಳಿ ಇರುವ ದುಬಾರಿ ಬೆಲೆಗಳ ಕಾರುಗಳ ಪಟ್ಟಿಗೆ ಹೊಸ ಸೇರ್ಪಡೆಯೆಂದರೆ 10 ಕೋಟಿ ರೂ. ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಎಸ್‌ಯುವಿ. ಬಿಲಿಯನೇರ್ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿಗೆ ಈ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ನೀತಾ ಅಂಬಾನಿ ಯಾವಾಗಲೂ ಕಾಸ್ಟ್ಲೀ ಡಿಸೈನರ್ ಡ್ರೆಸ್, ಜ್ಯುವೆಲ್ಲರಿ, ಪರ್ಸ್ ಹಿಡಿದು ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಾರೆ. ನೀತಾ ಕಾಸ್ಟ್ಲೀ ವಸ್ತುಗಳನ್ನು ನಿಸ್ಸಂದೇಹವಾಗಿ ಇಷ್ಟಪಡುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹೀಗಿರುವಾಗ, ದೀಪಾವಳಿಗೆ ಮುಂಚಿತವಾಗಿ ಮುಕೇಶ್ ಅಂಬಾನಿ ತನ್ನ ಪತ್ನಿ ನೀತಾ ಅಂಬಾನಿಗೆ 10 ಕೋಟಿ ರೂಪಾಯಿಗಳ ಎಸ್‌ಯುವಿ ಉಡುಗೊರೆಯಾಗಿ ನೀಡಿದ್ದಾರೆ.
ಕಾರಿನ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ CS 12 Vlogs ಹಂಚಿಕೊಂಡಿದೆ. ನೀತಾ ಅಂಬಾನಿಯವರ ಹೊಸ ರೋಲ್ಸ್ ರಾಯ್ಸ್ ಈಗ ಭಾರತದ ಅತ್ಯಂತ ದುಬಾರಿ ಕಾರು ಎಂದು ಗುರುತಿಸಿಕೊಂಡಿದೆ.
ಕಸ್ಟಮೈಸ್ ಮಾಡಲು ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ನೀಡುತ್ತದೆ. ಹುಡ್ ಅಡಿಯಲ್ಲಿ, ಅಲ್ಟ್ರಾ-ಐಷಾರಾಮಿ SUV 6.75-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್‌ನಿಂದ ಚಾಲಿತವಾಗಿದ್ದು ಅದು 600 Bhp ಮತ್ತು 900 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅದೇನೆ ಇರ್ಲಿ,ಒಟ್ನಲ್ಲಿ ಅಂಬಾನಿ ಫ್ಯಾಮಿಲಿಯ ಕಾಸ್ಟ್ಲೀ ಕಾರು ಕಲೆಕ್ಷನ್‌ಗೆ ಸದ್ಯ ಹೊಸ ಕಾರೊಂದು ಸೇರ್ಪಡೆಯಾಗಿದೆ. ಕೆಲವೆ ಕೆಲವು ಸ್ಟಾರ್ಸ್ಗಳು ಮಾತ್ರ ಈ ಐಷಾರಾಮಿ ಕಾರಿನ ಮಾಲೀಕರಾಗಿದ್ದಾರೆ ಎನ್ನಲಾಗಿದೆ.