ನವದೆಹಲಿ; ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೊಹರಂನ 10ನೇ ದಿನವಾದ ಇಂದು ಇಂದು (06) ಹಜರತ್ ಇಮಾಮ್ ಹುಸೇನ್ ತೋರಿಸಿದ ಮಾರ್ಗವನ್ನು ಅನುಸರಿಸಲು ಮನವಿ ಮಾಡಿದ್ದಾರೆ.
ಈ ಮೊಹರಂ ದಿನದಂದು, ಹೋರಾಟ, ತ್ಯಾಗ ಮತ್ತು ಸಮರ್ಪಣೆಯ ಮೂಲಕ ನಮ್ಮನ್ನು ಮಾನವೀಯತೆ, ಶಾಂತಿ ಮತ್ತು ಏಕತೆಗೆ ಕರೆದೊಯ್ಯುವ ಹಜರತ್ ಇಮಾಮ್ ಹುಸೇನ್ ತೋರಿಸಿದ ಮಾರ್ಗವನ್ನು ಅನುಸರಿಸಲು ನಾವು ಪ್ರತಿಜ್ಞೆ ಮಾಡಬೇಕು ಎಂದು ರಾಹುಲ್ ಗಾಂಧಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಮೊಹರಂ ಮೆರವಣಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದರು. ಕನ್ವರ್ ಯಾತ್ರೆಯೂ ಇದೇ ಸಮಯದಲ್ಲಿ ನಡೆಯುತ್ತಿರುವುದರಿಂದ, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಮೊಹರಂ 10ನೇ ದಿನವಾದ ಆಶುರಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಹಜರತ್ ಇಮಾಮ್ ಹುಸೇನ್ ಅವರ ತ್ಯಾಗಗಳ ಬಗ್ಗೆ ಸ್ಮರಿಸಿದರು. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಹಜರತ್ ಇಮಾಮ್ ಹುಸೇನ್ ಅವರ ತ್ಯಾಗಗಳು ಧರ್ಮದ ಬಗ್ಗೆ ಅವರ ಬದ್ಧತೆಯನ್ನು ತೋರಿಸುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಕೂಡ ಸತ್ಯದ ಪರ ನಿಲ್ಲುವಂತೆ ಅವರು ಜನರನ್ನು ಪ್ರೇರೇಪಿಸಿದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕ್ಯಾಬ್ ಚಾಲಕರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿದ್ದ ಹಂತಕ 24 ವರ್ಷಗಳ ನಂತರ ಬಂಧನ| serial-killer
(ಏಜೆನ್ಸೀಸ್)
ಸಂಭಾಲ್, ಲಕ್ನೋ ಮತ್ತು ಮೊರಾದಾಬಾದ್ ಸೇರಿದಂತೆ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಮೊಹರಂ ಮೆರವಣಿಗೆಗಳು ಮತ್ತು ಕನ್ವರ್ ಯಾತ್ರೆ ನಡೆಯುತ್ತಿರುವುದರಿಂದ, ರಾಜ್ಯ ಆಡಳಿತವು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಭದ್ರತಾ ಕ್ರಮಗಳನ್ನು ಹೆಚ್ಚಿಸಿದೆ.
ಮುಸ್ಲಿಮರಿಗೆ ಮೊಹರಂ ಧಾರ್ಮಿಕ ಮಹತ್ವವನ್ನು ಹೊಂದಿದೆ. ಭಾರತದಲ್ಲಿ, 7 ರಿಂದ 8 ಕೋಟಿ ಶಿಯಾ ಮುಸ್ಲಿಂ ಸಮುದಾಯವು ವಿವಿಧ ಧರ್ಮಗಳ ಜನರೊಂದಿಗೆ ದೊಡ್ಡ ಮೆರವಣಿಗೆಗಳಲ್ಲಿ ಬಾಗಿಯಾಗುತ್ತಾರೆ.