ಲಿಂಗದಹಳ್ಳಿ ಗ್ರಾಮ ಪಂಚಾಯಿತಿಯ ಮುಂಭಾಗದ ರಸ್ತೆಗೆ ಕೆಸರು ತುಂಬಿಕೊಂಡಿರುವುದು. 
ನ್ಯೂಸ್

ಕೆಸರುಮಯವಾದ ಲಿಂಗದಹಳ್ಳಿ ಗ್ರಾಪಂ ರಸ್ತೆ

ಜಿ.ಹೆಚ್. ಧನ್ಯಕುಮಾರ್

ಲಿಂಗದಹಳ್ಳಿ: ದೀಪದ ಕೆಳಗೆ ಕತ್ತಲೆ ಎಂಬಂತಿದೆ ಹೋಬಳಿ ಮುಖ್ಯ ಕೇಂದ್ರವಾದ ಲಿಂಗದಹಳ್ಳಿ ಗ್ರಾಮ ಪಂಚಾಯಿತಿಗೆ ಸಾಗುವ ರಸ್ತೆಯ ದುಸ್ಥಿತಿ.
ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಪ್ರತಿ ದಿನ ನೂರಾರು ಫಲಾನುಭವಿಗಳು ಗ್ರಾಪಂಗೆ ಬರುತ್ತಾರೆ. ಅವರು ಕೆಸರಿನ ರಸ್ತೆಯಲ್ಲೇ ಹಾದು ಕಚೇರಿ ಪ್ರವೇಶಿಸುವಂತಾಗಿದೆ. ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಬೇಕಾದ ಗ್ರಾಮ ಪಂಚಾಯಿತಿಗೆ ಹೋಗಲು ಅರಸಹಸ ಪಡಬೇಕಾಗಿದೆ ಸ್ಥಿತಿ ನಿರ್ಮಾಣವಾಗಿದೆ.
ಅಲ್ಪ ಸ್ವಲ್ಪ ಮಳೆ ಬಂದರು ಗ್ರಾಪಂ ಮುಂಭಾಗದಲ್ಲಿ ಕೆಸರು ನೀರು ತುಂಬಿಕೊಳ್ಳುತ್ತಿದ್ದು, ಕನಿಷ್ಟ 4-5 ಟ್ರಾಕ್ಟರ್ ಲೋಡ್ ಗ್ರಾವಲ್ ತಂದು ಸುರಿದರೆ ಜನರು ಸಾರಾಗವಾಗಿ ಸಂಚಾರಿಸಬಹುದಾಗಿದೆ. ಇದೇ ದಾರಿಯಲ್ಲಿ ಸಾಗುವ ಜನ ಪ್ರತಿನಿಧಿಗಳು ಮತ್ತು ಪಿಡಿಒ ಮಾತ್ರ ತಮಗೆ ಸಂಬಂಧವಿಲ್ಲದಂತೆ ಕಾಲಹರಣ ಮಾಡುತ್ತಿದ್ದಾರೆ.
ಗ್ರಾಪಂಗೆ ಇತ್ತೀಚೆಗಷ್ಟೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಅವರು ಗಮನ ಹರಿಸಿ ಗ್ರಾಪಂ ಮುಂಭಾಗದಲ್ಲಿರುವ ಕೆಸರಿಗೆ ಮುಕ್ತಿಕಾಣಿಸಬೇಕು ಎಂದು ಗ್ರಾಮಸ್ಥ ರು ಒತ್ತಾಯಿಸಿದ್ದಾರೆ.