ಮುದ್ದೇಬಿಹಾಳ: ಕನ್ನಡದ ನೆಲದಲ್ಲೇ ಹುಟ್ಟಿ ನಮ್ಮ ನೆಲದ ಜಲವನ್ನೇ ಕುಡಿದು ಕನ್ನಡಾಂಬೆಗೆ ಅವಮಾನಿಸುತ್ತಿರುವ ಎಂಇಎಸ್ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿ.ವೈ. ವಿಜಯೇಂದ್ರ ಯುವ ಬ್ರಿಗೇಡ್ ಪದಾಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬುಧುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ರ‌್ಯಾಲಿ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಬಿ.ಎಸ್. ಕಡಕಭಾವಿಗೆ ಮನವಿ ಪತ್ರ ಅರ್ಪಿಸಲಾಯಿತು.
ಯುವ ಬ್ರಿಗೇಡ್‌ನ ವಿಲಾಸ ಮೇಲ್ಮನಿ ಮಾತನಾಡಿ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಎಂಇಎಸ್ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟು ಹಾಕಿ ಅಪಮಾನ ಮಾಡಿದ್ದನ್ನು ತೀವ್ರವಾಗಿ ಖಂಡಿಸಲಾಗುತ್ತದೆ. ಕನ್ನಡ, ಭಾಷೆ, ನೆಲ, ಜಲ ರಕ್ಷಣೆ ನಮ್ಮ ಹಾಗೂ ನಮ್ಮನ್ನು ಆಳುವ ಸರ್ಕಾರದ ಕರ್ತವ್ಯವಾಗಿದೆ. ಎಂಇಎಸ್ ಗೂಂಡಾಗಳಿಗೆ ತಕ್ಕಪಾಠ ಕಲಿಸಬೇಕು. ಕನ್ನಡಿಗರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದರು.
ಮುಖಂಡ ಕಿರಣ ಪಾಟೀಲ ಮಾತನಾಡಿ, ಎಂಇಎಸ್‌ನ ಅವಿವೇಕಿಗಳು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಮೊದಲು ತಿಳಿದಕೊಳ್ಳಬೇಕೆಂದರು.
ಶರಣು ಬೂದಿಹಾಳಮಠ ೌಂಡೇಷನ್ ಸಂಚಾಲಕ ಮಹಾಂತೇಶ ಬೂದಿಹಾಳಮಠ, ಕನ್ನಡಪರ ಹೋರಾಟಗಾರ ವೀರೇಶ ಗುರುಮಠ, ರಮೇಶ ಕರಡ್ಡಿ, ಬಸವರಾಜ ಮೇಲಿ, ಮಹಾದೇವ ಬಿರಾದಾರ, ವಶೀಮ ದೇಸಾಯಿ, ಸೋಹೇಲ್ ಬೇಪಾರಿ, ಪ್ರಕಾಶ ಕಾಳೆ, ಮುನೀರ ಅವಟಗೇರ, ಚನ್ನಬಸವರಾಜ ಅಂಗಡಿ, ಸಾಗರ ವಾಲಿಕಾರ, ರಶೀದ ನದಾಫ್, ಬಸು ಮದರಿ ಇತರರಿದ್ದರು.