ಬೆಂಗಳೂರು:
ಮುಡಾ ಪ್ರಕರಣ ಚರ್ಚೆಗೆ ನಿಲುವಳಿ ಸೂಚನೆ ಮೇಲಿನ ತಿರಸ್ಕಾರ ಪುನರ್ ಪರಿಶೀಲಿಸುವಂತೆ ಅರ್ಜಿ ಕೊಟ್ಟಿದ್ದೇವೆ. ಆ ಬಗ್ಗೆ ನಿಮ್ಮ ತೀರ್ಮಾನ ತಿಳಿಸುವಂತೆ ವಿರೋಧ ಪಕ್ಷಗಳು ಮನವಿ ಮಾಡಿದವು.
ಮುಖ್ಯ ಸಚೇತಕ ಸಲೀಂ ಅಹಮದ್, ಈ ಬಗ್ಗೆ ನಿನ್ನೆ ರೂಲಿಂಗ್ ನೀಡಲಾಗಿದೆ. ಈಗ ಬಿಲ್ಗಳಿವೆ. ಅದಕ್ಕೆ ಅವಕಾಶ ನೀಡಲಿ. ಕಲಾಪ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಲಿ ಎಂದರು.
ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಜೆಡಿಎಸ್‌ನ ಭೋಜೇಗೌಡ ಅವರು, ನಿನ್ನೆ ನಮ್ಮ ಮನವಿ ಸಲ್ಲಿಸಿದ್ದೇವೆ, ನಿಮ್ಮ ನಿರ್ಣಯ ಪ್ರಕಟಿಸಿ ಎಂದು ಪಟ್ಟು ಹಿಡಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು, ನೀವು ಬಾವಿಯಿಂದ ನಿಮ್ಮ ಖುರ್ಚಿಗೆ ಹೋಗಿ ಕೂತ್ಕೊಳಿ ನಾನು ನನ್ನ ನಿರ್ಣಯ ಪ್ರಕಟಿಸುತ್ತೇನೆ ಎಂದರು.
ಮುಡಾ ಪ್ರಕರಣ ಚರ್ಚೆ ನಿಲುವಳಿ ಸೂಚನೆ ಪ್ರಸ್ತಾಪ ವನ್ನ ತಿರಸ್ಕರಿಸಿದ್ದೆ. ಇದರ ಮೇಲಿನ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿದ್ದೀರಿ. ನಿಯಮ 63/1 ರಡಿ ಈ ಪ್ರಕರಣ ನಿರ್ಧಿಷ್ಟ ವಿಚಾರ ಅಲ್ಲದ ಕಾರಣ ಪುನರ್ ಪರಿಶೀಲನೆ ಅರ್ಜಿಯನ್ನು ತಿರಸ್ಕರಿಸುವುದಾಗಿ ಪ್ರಕಟಿಸಿದರು.
ಸಭಾಪತಿ ರೂಲಿಂಗ್ ಪ್ರಕಟವಾದ ಬೆನ್ನಲ್ಲಿಯೇ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ೋಷಣೆ ಮೊಳಗಿಸಿ ಪ್ರತಿಭಟನೆ ಮುಂದುವರಿಸಿದರು.