ನ್ಯೂಸ್

14 ಸೈಟು ಪಡೆದಿರುವ ಬಗ್ಗೆ ಚರ್ಚೆ ಬೇಡ ಎಂದರೆ ಹೇಗೆ?

Bengaluru - Political - Shivananda Tagadur

ಬೆಂಗಳೂರು:
ಮುಖ್ಯಮಂತ್ರಿ ಪತ್ನಿ ಹೆಸರಿನಲ್ಲಿ 14 ಸೈಟು ಪಡೆದಿರುವ ಬಗ್ಗೆ ಚರ್ಚೆನೆ ಮಾಡಬೇಡಿ ಎಂದರೆ ಹೇಗೆ? ಯಾರು ಒಪ್ಪುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ಷೇಪಿಸಿದರು.
ಮೇಲ್ಮನೆಯಲ್ಲಿ ಮಾತನಾಡಿದ ಅವರು, ಮೂಡಾ ಹಗರಣ ಬಗ್ಗೆ ನಿಯಮ 68 ಕ್ಕೆ ಕನ್ವರ್ಟ್ ಮಾಡಿ ಚರ್ಚೆಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು.
ಈ ಸಮದರ್ಭದಲ್ಲಿ ಮಾತನಾಡಿದ ಸಿ.ಟಿ.ರವಿ, ಮುಡಾ ಹಗರಣ ಚರ್ಚೆಯಾದರೆ ಜೈಲಿಗೆ ಹೋಗ್ತೀವಿ ಅಂತ ಸಿಎಂಗೆ ಭಯಾನ? ಚರ್ಚೆಯೇ ಆಗಬಾರದು ಅಂದರೆ ಹೇಗೆ? ನಾವು ಇಲ್ಲಿ ಕುಸ್ತಿ ಆಡೋಣವಾ? ಎಂದು ಕೇಳಿದರು.
ನೀವು ವಿರೋಧ ಪಕ್ಷದಲ್ಲಿದ್ದರೆ, ಸುಮ್ಮನೆ ಇರುತ್ತಿದ್ರಾ? ನೀವು ಪೇಸಿಎಂ ಎಂದು ಆಂಟಿಸಿದ್ರಿ? ನಾವು ಮೂಡಾ ಲೂಟ್ ಸಿಎಂ ಎಂದು ಅಂಟಿಸಬೇಕಾ? ಈಗ ಆಡಳಿತದಲ್ಲಿದ್ದೀರಿ, ನಾಳೇ ನೀವು ವಿರೋಧ ಪಕ್ಷಕ್ಕೆ ಬರಬಹುದು. ಮೊದಲು ಚರ್ಚೆಗೆ ಅವಕಾಶ ಮಾಡಿಕೊಡಿ ಎಂದರು.