ಟೀಂ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಎಂ.ಎಸ್ ಧೋನಿ ಕಟ್ಟಿಂಗ್ ತುಂಬಾನೆ ಫೇಮಸ್ ಆಗಿತ್ತು. ಬಾಲಿವುಡ್ ಹಾಗೂ ಕ್ರಿಕೆಟಿಗರ ನೆಚ್ಚಿನ ಹೇರ್ ಸ್ಟೈಲಿಸ್ಟ್ ಹಲಿಮ್ ಹಕ್ಕಿಂ ನೀಡಿರುವ ಮೇಕ್ ಓವರ್ನಲ್ಲಿ ಧೋನಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು.
ಇದೀಗ ಮತ್ತೆ ಎಂ.ಎಸ್ ಧೋನಿ ಕಲರಿಂಗ್ ಮಾಡಿಸಿ ಹೊಸ ಹೇರ್ಕಟ್ ಮಾಡಿಸಿಕೊಂಡಿದ್ದು, ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಾಪ್ ಸೆಲೆಬ್ರಿಟಿಗಳನ್ನು ಮತ್ತಷ್ಟು ಸುಂದರವಾಗಿ ಮಾಡುವ ಕೆಲಸದಲ್ಲಿ ಪ್ರಸಿದ್ಧ ಕೇಶ ವಿನ್ಯಾಸಕಿ ಆಲಿಮ್ ಹಕೀಮ್ ತುಂಬಾನೆ ಫೇಮಸ್. ಇದೀಗ ಎಮ್.ಎಸ್ ಧೋನಿಗೂ ಮತ್ತೆ ಹೊಸ ಹೇರ್ಸ್ಟೈಲನ್ನ ಅವರೇ ಮಾಡಿದ್ದಾರೆ.
ಆಲಿಮ್ ಹಕೀಮ್ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಧೋನಿಯ ಹೊಸ ಲುಕ್ನ ಫೋಟೋಗಳನ್ನ ಹಂಚಿಕೊಂಡಿದ್ದರು. ಈ ಮೇಕ್ ಓವರ್‌ಗೆ ಅಭಿಮಾನಿಯೊಬ್ಬರು ಧೋನಿಗೆ ಮಾಡಿಕೊಟ್ಟ ಫೋಟೋನ ಸಹಾಯ ತೆಗೆದುಕೊಂಡಿದ್ದಾರೆ ಸ್ಟೈಲಿಸ್ಟ್ ಹಲಿಮ್ ಹಕ್ಕಿಂ.
ಎಂಎಸ್ ಧೋನಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ಎಂ. ಎಸ್ ಧೋನಿ ಯಾವುದೇ ಹಿಂಜರಿಕೆಯಿಲ್ಲದೆ ಈ ಕಟ್ಟಿಂಗ್ ಮಾಡಿಸಿಕೊಂಡಿದ್ದಾರೆ. ಧೋನಿಯ ಕೂದಲನ್ನು ಉದ್ದವಾಗಿ ಬೆಳೆಸಿ ನಂತರ ಅದನ್ನ ಕಟ್ ಮಾಡಿ ಕಲರಿಂಗ್ ಮಾಡುವ ಪ್ಲಯಾನನ್ನ ಹೇರ್ಸ್ಟ್ಐಲಿಸ್ಟ್ ಮತ್ತು ಕ್ರಿಕೆಟಿಗ ಧೋನಿ ಮೊದಲೇ ಹೊಂದಿದ್ದರು. ಅದರಂತೆಯೇ ಇದೀಗ ಧೋನಿ ಹೊಸ ಲುಕ್ ಪಡೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಆಲಿಮ್ ಹಕೀಮ್, ನಾನು ಮಾಹಿ ಭಾಯಿ ಅವರ ಉದ್ದನೆಯ ಕೂದಲಿನ ದೊಡ್ಡ ಅಭಿಮಾನಿಯಾಗಿದ್ದೇನೆ, ಕೂದಲಿಗೆ ಹೊಸ ವಿನ್ಯಾಸ ಮತ್ತು ಬಣ್ಣವನ್ನು ರಚಿಸಲು ನಾವು ನಿರ್ಧರಿಸಿದ್ದೆವು.
ಇದೀಗ ಧೋನಿಗೆ ಹೊಸ ಲುಕ್ ನೀಡಿರುವುದು ತುಂಬಾನೆ ಖುಷಿ ತಂದಿದೆ ಎಂದು ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಧೋನಿಯವರ ನ್ಯೂ ಲುಕ್ ಪೋಸ್ಟ್ ಮಾಡಲಾದ ಒಂದು ಗಂಟೆಯೊಳಗೆ ತ್ವರಿತವಾಗಿ 70 ಸಾವಿರ ಲೈಕ್‌ಗಳನ್ನು ಗಳಿಸಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ.