ತಮಿಳುನಾಡು: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಮಹೇಂದ್ರ ಸಿಂಗ್ ಧೋನಿ ಅವರ 'ಧೋನಿ ಎಂಟರ್ಟೈನ್ಮೆಂಟ್' ಬ್ಯಾನರ್ನಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ 'ಲೆಟ್ಸ್ ಗೆಟ್ ಮ್ಯಾರೀಡ್'ಗೆ ಇದೀಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಯು ಸರ್ಟಿಫಿಕೇಟ್ ಲಭಿಸಿದೆ.
ಚಿತ್ರವು ಇದೀಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಯು ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಸಿನಿಮಾದ ರನ್ ಟೈಮ್ 2 ಗಂಟೆ 33 ನಿಮಿಷಗಳಿಗೆ ಲಾಕ್ ಮಾಡಲಾಗಿದೆ. 'ಲೆಟ್ಸ್ ಗೆಟ್ ಮ್ಯಾರೀಡ್' ಕಾಮಿಡಿ-ಡ್ರಾಮ್ ಜಾನರ್ ಆಗಿದ್ದು, ಚಿತ್ರ ಜುಲೈ 28 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.
ಧೋನಿ ಅವರ ನಿರ್ಮಾಣದಲ್ಲಿ ತೆರೆಯ ಮೇಲೆ ಬರಲು ಸಜ್ಜಾಗಿರುವ 'ಲೆಟ್ಸ್ ಗೆಟ್ ಮ್ಯಾರೀಡ್' ಚಿತ್ರವು ಮೂಲತಃ ತಮಿಳು ಚಲನಚಿತ್ರವಾಗಿದ್ದು, ತೆಲುಗು ಭಾಷೆಯಲ್ಲಿ ಡಬ್ ಆಗಿ ಆಗಸ್ಟ್ 04 ರಂದು ರಿಲೀಸ್ ಆಗಲಿದೆ. ರಮೇಶ್ ತಮಿಳಮಣಿ ನಿರ್ದೇಶನದ ಈ ಚಿತ್ರದಲ್ಲಿ ನಾಯಕನಾಗಿ ಹರೀಶ್ ಕಲ್ಯಾಣ್ ಮತ್ತು ನಾಯಕಿಯಾಗಿ ಇವಾನಾ ಅಭಿನಯಿಸಿದ್ದಾರೆ, ನದಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).