ನ್ಯೂಸ್

ಭರವಸೆ ಮೂಡಿಸಿದ 'ಲೆಟ್ಸ್​​ ಗೆಟ್​​ ಮ್ಯಾರೀಡ್​​' ಚಿತ್ರದ ಟ್ರೇಲರ್​​; ಧೋನಿಗೆ ಅಭಿನಂದನೆ ತಿಳಿಸಿದ ಫ್ಯಾನ್ಸ್​​

ಚೆನ್ನೈ: ಇಂದು ಚೆನ್ನೈ ನಗರಕ್ಕೆ ಭೇಟಿ ನೀಡಿದ ಮಹೇಂದ್ರ ಸಿಂಗ್​ ಧೋನಿ, ತಮ್ಮ ಮೊದಲ ನಿರ್ಮಾಣದ 'ಲೆಟ್ಸ್​​ ಗೆಟ್​​ ಮ್ಯಾರೀಡ್​​' ಚಿತ್ರದ ಆಡಿಯೋ ಮತ್ತು ಟ್ರೇಲರ್​​ ಅನ್ನು ಭರ್ಜರಿಯಾಗಿ ಲಾಂಚ್​ ಮಾಡಿದ್ದಾರೆ.

ಬಹುನಿರೀಕ್ಷಿತ ಲೆಟ್ಸ್ ಗೆಟ್ ಮ್ಯಾರೀಡ್ ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಅನ್ನು ಇಂದು ಚೆನ್ನೈನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಿದ ಧೋನಿ ಮತ್ತು ಚಿತ್ರತಂಡ ಸಂತಸವನ್ನು ಹಂಚಿಕೊಂಡಿದೆ. ರಮೇಶ್ ತಮಿಳಮಣಿ ನಿರ್ದೇಶನದ ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್ ವೀಕ್ಷಿಸಿದ ಬಳಿಕ ಹಲವು ಭಾವನೆಗಳ ಮಿಶ್ರಣದೊಂದಿಗೆ ಚಿತ್ರ ರೂಪುಗೊಂಡಿದೆ ಎಂಬುದು ತಿಳಿಯುತ್ತದೆ. ಸಿನಿಮಾದ ಕಥಾಹಂದರದ ತುಣುಕು ಟ್ರೇಲರ್ ಮೂಲಕ ಪರಿಚಯಗೊಳ್ಳುತ್ತದೆ. ಸಿನಿಮಾ ತಂಡಕ್ಕೆ ಮತ್ತು ತಮ್ಮ ನೆಚ್ಚಿನ ಕ್ರಿಕೆಟಿಗ ಮಹೇಂದ್ರ ಸಿಂಗ್​ ಧೋನಿ ಅವರಿಗೆ ಸಿನಿಪ್ರೇಕ್ಷಕರು ಮೆಚ್ಚುಗೆ ಮತ್ತು ಅಭಿನಂದನೆಗಳು ಕಮೆಂಟ್​ ಮೂಲಕ ತಿಳಿಸಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್ ನಿರ್ಮಾಣದ ಲೆಟ್ಸ್ ಗೆಟ್ ಮ್ಯಾರೀಡ್ ಚಿತ್ರದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ನಿರ್ದೇಶಕರು ಹೇಳಿದ್ದಾರೆ,(ಏಜೆನ್ಸೀಸ್).