ರಾಂಚಿ: ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಆರಾಧಿಸುವ ಅಭಿಮಾನಿಗಳು ಜಗತ್ತಿನಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಒಂದಲ್ಲ ಒಂದು ಕಾರಣಗಳಿಂದ ಧೋನಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿ ಇರುತ್ತಾರೆ. ಅದರಂತೆಯೇ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ತಮ್ಮ ಅಗಾಧ ಸಂಖ್ಯೆಯ ಕಾರು ಮತ್ತು ಬೈಕ್ಗಳನ್ನು ರಾಂಚಿಯ ರಸ್ತೆಗಳಲ್ಲಿ ಚಲಾಯಿಸುವಾಗ ಅಭಿಮಾನಿಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಟ್ರೆಂಡ್ ಆಗುತ್ತಲ್ಲೇ ಇರುತ್ತಾರೆ. ಈ ಬಾರಿ ಕೂಡ ಅದೇ ರೀತಿ ಬೈಕ್ನಲ್ಲಿ ಹೋಗುವಾಗ, ದಾರಿ ಮಧ್ಯೆ ಲಿಫ್ಟ್ ಕೇಳಿದ ಯುವ ಕ್ರಿಕೆಟಿಗನಿಗೆ, ಆತನ ಕೋಚಿಂಗ್ ಮೈದಾನದವರೆಗೆ ಲಿಫ್ಟ್ ಕೊಡುವ ಮುಖೇನ ತಮ್ಮ ಸರಳತೆ ಮೆರೆದಿದ್ದಾರೆ.
ಧೋನಿ ಅವರೊಂದಿಗೆ ಬೈಕ್ ಸವಾರಿ ಮಾಡಿದ ಯುವ ಕ್ರಿಕೆಟಿಗ, ವಿಡಿಯೋ ಮಾಡಿಕೊಳ್ಳುವ ಮುಖೇನ ಭಾರೀ ಸಂತಸವನ್ನು ವ್ಯಕ್ತಪಡಿಸಿದ್ದಾನೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಧೋನಿ ಅವರ ಸರಳತೆಗೆ ಫಿದಾ ಆಗಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮಾಡಿ, ಶೇರ್ ಮಾಡಿದ್ದಾರೆ,(ಏಜೆನ್ಸೀಸ್).