ನ್ಯೂಸ್

ಫೋಟೋ ಎಡಿಟ್​ ಮಾಡಿದ ಅಭಿಮಾನಿಗೆ ‘ಸೀತಾಮಹಾಲಕ್ಷ್ಮಿ’ ಕ್ಲಾಸ್​​; ಬಳಿಕ ಬದಲಾದ Mrunal Thakur ಮಾತು..

ಮುಂಬೈ: ಸೀತಾ ರಾಮಂ ಸಿನಿಮಾದಲ್ಲಿ ಸೀತಾಮಹಾಲಕ್ಷ್ಮಿ ಪಾತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡು, ತಮ್ಮ ಸೌಂದರ್ಯದ ಮೂಲಕ ಅಭಿಮಾನಿಗಳ ಮನಗೆದ್ದ ಮರಾಠಿ ಚೆಲುವೆ ಮೃಣಾಲ್​ ಠಾಕೂರ್(Mrunal Thakur)​​. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ನಂತರ ಮೃಣಾಲ್ ಠಾಕೂರ್ ರಾತ್ರೋರಾತ್ರಿ ಸ್ಟಾರ್​​ ಪಟ್ಟ ಗಿಟ್ಟಿಸಿಕೊಂಡರು. ಅದರ ನಂತರ ಬ್ಯಾಕ್ ಟು ಬ್ಯಾಕ್ ‘ಹಾಯ್ ನನ್ನ’, ‘ಫ್ಯಾಮಿಲಿ ಸ್ಟಾರ್’ ಸಿನಿಮಾಗಳಲ್ಲಿ ಮಿಂಚಿದ್ದು ಗೊತ್ತಿದೆ.

ಮೃಣಾಲ್ ಅವರ ವ್ಯಕ್ತಿತ್ವ ಮತ್ತು ಶೈಲಿ ಯಾವಾಗಲೂ ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ರೀವ್​ ಆಗಿರುವ ನಟಿ ಆಗಾಗ್ಗೆ ತಮ್ಮ ಅಭಿಮಾನಿಗಳೊಂದಿಗೆ ವಿಚಾರ ವಿನಿಮಯ ಮಾಡುತ್ತಿರುತ್ತಾರೆ. ಇತ್ತೀಚೆಗೆ ನಟಿ ಮೃಣಾಲ್​ ಠಾಕೂರ್​​​ ಅವರ ಅಭಿಮಾನಿಯೊಬ್ಬರು ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಭಿಮಾನಿ ಮತ್ತು ಮೃಣಾಲ್​​ ಒಟ್ಟಿಗೆ ದೀಪಾವಳಿ ಆಚರಿಸುತ್ತಿರುವಂತೆ ಕಾಣುತ್ತದೆ.

ಮೊದಲಿಗೆ ಈ ಪೋಸ್ಟ್​ ನೋಡಿ ನಟಿ ಮೃಣಾಲ್​​ ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನೀವೇಕೆ ಸುಳ್ಳನ್ನು ಹೀಗೆ ಹೇಳುತ್ತಿದ್ದೀರಿ? ನೀವು ಮಾಡಿರುವುದು ತಪ್ಪಾಗಿದೆ ಎಂದು ಭಾವಿಸುತ್ತೀರಾ? ಇಲ್ಲ! ಎಂದು ಕಾಮೆಂಟ್​ ಮಾಡಿದ್ದಾರೆ. ಬಳಿಕ ಕೆಲವು ನಿಮಿಷಗಳಲ್ಲಿ ತಮ್ಮ ಕಾಮೆಂಟ್​​ ಅನ್ನು ತಾವೇ ಡಿಲೀಟ್​ ಮಾಡಿದ್ದಾರೆ. ಅಭಿಮಾನಿಯೊಬ್ಬ ಎಡಿಟ್​ ಮಾಡಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವು ಮುಂದೊಂದು ದಿನ ದೊಡ್ಡ ಸಿನಿಮಾವನ್ನು ಎಡಿಟ್​​ ಮಾಡುತ್ತೀರಿ..ಗುಡ್​​ ಲಕ್​, ಹ್ಯಾಪಿ ದೀಪಾವಳಿ ಎಂದು ಬರೆದಿದ್ದಾರೆ.

ಎರಡೂ ಪ್ರತಿಕ್ರಿಯೆಯನ್ನು ನೋಡಿರುವ ನೆಟ್ಟಿಗರು ನಟಿ ಮೃಣಾಲ್​ ಅವರ ಎಲ್ಲಾ ಪೋಸ್ಟ್​ಗಳು ಅವರ ಪಿಆರ್​ ಸಿಬ್ಬಂದಿ ಕೈನಲ್ಲಿದೆ, ಪಿಆರ್​ಗಳ ಪ್ರತಿಕ್ರಿಯೆ ಒಬ್ಬರ ಭಾವನೆಯನ್ನು ಧ್ವಂಸ ಮಾಡುತ್ತದೆ, ಇನ್ನೇನು ಮಾಡಬೇಕೆಂದು ನೀವು ಭಾವಿಸುತ್ತೀರಿ ಎಂದು ಕಾಮೆಂಟ್​ ಮಾಡಿದ್ದಾರೆ.

ಮೃಣಾಲ್ ಠಾಕೂರ್ ಇತ್ತೀಚೆಗೆ ವಿಜಯ್ ದೇವರಕೊಂಡ ಅವರೊಂದಿಗೆ 'ಫ್ಯಾಮಿಲಿ ಸ್ಟಾರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮಾಡದಿದ್ದರೂ ಜನ ಮೆಚ್ಚಿಕೊಂಡಿದ್ದರು. 'ಕಲ್ಕಿ 2898 AD' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಮೃಣಾಲ್​​ ಠಾಕೂರ್​​​ 'ಪೂಜಾ ಮೇರಿ ಜಾನ್', 'ವಿಶ್ವಂಬರ್' ಮತ್ತು 'ಸನ್ ಆಫ್ ಸರ್ದಾರ್ 2' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್​)