ದೀಪಕ್, ನಾಯಕ ನಟ 
ನ್ಯೂಸ್

ಫೆ.7ಕ್ಕೆ ಮಿಸ್ಟರ್ ರಾಣಿ ಸಿನಿಮಾ ತೆರೆಗೆ

ಶಿವಮೊಗ್ಗ: ಹಾಸ್ಯ ಹಾಗೂ ಕುತೂಹಲಭರಿತ ಕನ್ನಡ ಚಿತ್ರ ಮಿಸ್ಟರ್ ರಾಣಿ ಫೆ.7ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಕುಟುಂಬ ಸಮೇತ ಈ ಚಿತ್ರವನ್ನು ವೀಕ್ಷಿಸಬಹುದು ಎಂದು ಚಿತ್ರದ ನಾಯಕ ನಟ ದೀಪಕ್ ಸುಬ್ರಹ್ಮಣ್ಯ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಮಧುಚಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದು, ನಾಯಕಿಯಾಗಿ ಬಹುಭಾಷಾ ತಾರೆ ಪಾರ್ವತಿ ನಾಯರ್ ಅಭಿನಯಿಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಲಕ್ಷ್ಮೀ ಕಾರಂತ್, ಶ್ರೀವತ್ಸ, ಮಧುಚಂದ್ರ, ಆನಂದ್ ನೀನಾಸಂ ಅಭಿನಯಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಮತ್ತು ಋತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರವೀಂದ್ರನಾಥ್ ಛಾಯಾಗ್ರಹಣವಿದೆ ಎಂದರು.

ಪ್ರಮುಖರಾದ ಸಿದ್ಧರಾಜು, ಶಶಿಕುಮಾರ್, ಚಂದ್ರಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು.