ಭೋಪಾಲ್: ತನ್ನಿಬ್ಬರು ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ವಿಷವುಣಿಸಿದ ಮಹಿಳೆ, ಪ್ರಿಯಕರನೊಂದಿಗೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬಾರಾಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಒಂದೇ ಕುಟುಂಬದ 12ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಪತಿ, ಮೈದುನ ಮತ್ತು ತನ್ನಿಬ್ಬರು ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ಮಹಿಳೆ ವಿಷವಿಕ್ಕಿದ್ದಾಳೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಗ್ವಾಲಿಯರ್ನ ಜಯ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯ ಪತಿ ಮೃತಪಟ್ಟಾಗ ಪತಿ ಕಿರಿಯ ಸಹೋದರ ಛೋಟು ಖಾನ್ನನ್ನು ಮಹಿಳೆಗೆ ಮರು ಮದುವೆ ಆಗಿದ್ದಳು. ಆದರೆ, ಮಹಿಳೆ ಛೋಟು ಖಾನ್ ಸೋದರ ಮಾವ ಲೋಖನ್ ಖಾನ್ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ.
ಈ ವಿಚಾರ ತಿಳಿದು ಕುಟುಂಬದಲ್ಲಿ ಗಲಾಟೆಯು ನಡೆದಿತ್ತು. ಹೀಗಿರುವಾಗ ಶನಿವಾರ ಮಹಿಳೆ ಲೋಖನ್ ಖಾನ್ ಜತೆ ಓಡಿ ಹೋಗಿದ್ದಾಳೆ. ಅದಕ್ಕೂ ಮುನ್ನ ಆಹಾರದಲ್ಲಿ ವಿಷ ಬೆರೆಸಿಟ್ಟು ಪರಾರಿಯಾಗಿದ್ದಾಳೆ.
36 ವರ್ಷದ ಆರೋಪಿ ಮಹಿಳೆಗೆ ಇಬ್ಬರು ಮಕ್ಕಳಿದ್ದರು. ಪತಿ, ಅತ್ತೆ-ಮಾವ, ಮೈದುನ, ಅತ್ತಿಗೆ ಸೇರಿದಂತೆ ಇಡೀ ಕುಟುಂಬ ವಿಷಾಹಾರ ಸೇವಿ ಆಸ್ಪತ್ರೆ ಪಾಲಾಗಿದ್ದಾರೆ. ಇತ್ತ ಮಹಿಳೆಯ ಮೇಲೆ ಎಫ್ಐಆರ್ ದಾಖಲಾಗಿದ್ದು ಆಕೆಯ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)