ನ್ಯೂಸ್

ಆರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ: ಹುಟ್ಟಿದ ಕೂಡಲೇ ಕಣ್ಣು ಮುಚ್ಚಿದ ಎರಡು ಶಿಶು

ಶಿಯೋಪುರ್​(ಮಧ್ಯಪ್ರದೇಶ): ಗರ್ಭಿಣಿಯೊಬ್ಬಳು ಬರೋಬ್ಬರಿ 6 ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಮಧ್ಯಪ್ರದೇಶದ ಶಿಯೋಪುರ್​ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಜಿಲ್ಲೆಯಲ್ಲೇ ಇದು ಮೊದಲನೇ ಪ್ರಕರಣವಾಗಿದ್ದು, ದುರಾದೃಷ್ಟವಶಾತ್​ ಹುಟ್ಟಿದ ಆರು ಮಕ್ಕಳಲ್ಲಿ ಇಬ್ಬರು ಬದುಕುಳಿಯಲಿಲ್ಲ. ಉಳಿದ ಶಿಶುಗಳನ್ನು ಆಸ್ಪತ್ರೆಯ ಶಿಶು ಪಾಲನಾ ಘಟಕದಲ್ಲಿ ಪರಿವೀಕ್ಷಣೆಗೆ ಇಡಲಾಗಿದೆ.

ಇನ್ನು ತಾಯಿಯ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)