ಬೆಳಗಾವಿ: ಬ್ರಿಟನ್‌ನಲ್ಲಿ ನಮ್ಮ ದೇಶದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಸರಿಯಲ್ಲ.
ಇಂಗ್ಲೆಂಡ್ ಹಾಗೂ ಬ್ರಿಟನ್‌ನಲ್ಲಿ ಭಾರತದ ಪ್ರಜಾಪ್ರಭುತ್ವ ತೊಂದರೆಯಲ್ಲಿದೆ ಎಂದು ಹೇಳುವ ಮೂಲಕ ದೇಶಕ್ಕೆ ಅವಮಾನ ಮಾಡಿರುವ ರಾಹುಲ ಗಾಂಧಿ ಕ್ಷಮೆಯಾಚಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದರು.
ನಗರದ ಸಾಂಬ್ರಾಮ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾತನಾಡಿದ ಅವರು,ರಾಹುಲ್ ಗಾಂಧಿ ದೇಶದ ಯುವಕರ ಕ್ಷಮೆಯಾಚಿಸಬೇಕು.
ಕರ್ನಾಟಕ ಅನುಭವ ಮಂಟಪದ ನಾಡು.
ಈ ನಾಡಿಗೆ ಅವರು ಕಾಲಿಡುವ ಮುಂಚೆ, ಈ ನಾಡಿನ ಜನತೆ ಹಾಗೂ ಯುವಕರ ಕ್ಷಮೆ ಕೇಳಬೇಕು.
ಬಿಜೆಪಿ ಯುವ ಮೋರ್ಚಾ ಆಗ್ರಹಿಸುತ್ತದೆ ಎಂದರು.
ಈ ದೇಶದ ಬಗ್ಗೆ ರಾಗಾಗೆ ಕಳಕಳಿ, ಕಾಳಜಿ ಇದೆಯಾ ಎಂದು ವಾಗ್ದಾಳಿ ನಡೆಸಿದರು.