ನ್ಯೂಸ್

ಗಾಯಾಳು ದಂಪತಿಗೆ ರಸ್ತೆಯಲ್ಲಿಯೇ ಚಿಕಿತ್ಸೆ ಕೊಟ್ಟ ಸಂಸದ

ರಾಮನಗರ

ಅಪಘಾತದಲ್ಲಿ ಗಾಯಗೊಂಡು ರಸ್ತೆ ಮಧ್ಯದಲ್ಲೇ ಬಿದ್ದಿದ್ದ ದಂಪತಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ  ಮತ್ತೊಮ್ಮೆ ತಾವೊಬ್ಬ ಹೃದಯವಂತ ಎನ್ನುವುದನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ ಎನ್ ಮಂಜುನಾಥ್ ಸಾಬೀತುಪಡಿಸಿದ್ದಾರೆ.

ಭಾನುವಾರ ಸಾತನೂರು ಬಳಿಯ ಕಬ್ಬಾಳಮ್ಮನ ದೇವಸ್ಥಾನಕ್ಕೆ ತೆರಳುತ್ತಿದ್ದ ಮಂಜುನಾಥ್ ರಾಷ್ಟ್ರೀಯ ಹೆದ್ದಾರಿ 2009ರ ಬಟ್ಟಲು ಗುಂಡಪ್ಪನ ದೇವಸ್ಥಾನದ ಬಳಿ ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ದಂಪತಿಯನ್ನು ಕಂಡು ತಕ್ಷಣವೇ ಕಾರನ್ನು ನಿಲ್ಲಿಸಿದ್ದಾರೆ.

ಟೆಂಪೋ ಒಂದು ಆನೇಕಲ್ ಮೂಲದ ದಂಪತಿ ತೆರಳುತ್ತಿದ್ದ ವಾಹನಕ್ಕೆ ದ್ವಿಚಕ್ರ ವಾಹನಕ್ಕೆ ಪರಾರಿ ಆಗಿದ್ದಾನೆ. ಗಾಯಗೊಂಡಿದ್ದ ದಂಪತಿಯನ್ನು ಕಂಡ ಸಂಸದ ಮಂಜುನಾಥ್,   ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಟ್ಟು, ವೈದ್ಯರ ಜೊತೆ ಮಾತನಾಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಡಾಕ್ಟರ್ ಮಂಜುನಾಥ್ ಅವರ ಈ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.