ಶಿವಮೊಗ್ಗ: ಕನ್ಸರ್ವೆನ್ಸಿಗಳನ್ನು ಸಮರ್ಪಕವಾಗಿ ಅಭಿವೃದ್ಧಿಗೊಳಿಸದೇ ನಮ್ಮನ್ನು ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿ ಎನ್ಟಿ ರಸ್ತೆಯ ಬೀದಿಬದಿ ವ್ಯಾಪಾರಿಗಳು ಸೋಮವಾರ ನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿದರು.
ಮೇಯರ್ ಶಿವಕುಮಾರ್ ಹಾಗೂ ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ ಅವರು ಕನ್ಸರ್ವೆನ್ಸಿಗಳಲ್ಲಿ ವ್ಯಾಪಾರ ನಡೆಸುವಂತೆ ಸೂಚನೆ ನೀಡಿದ್ದಾರೆ. ಆದರೆ ಕನ್ಸರ್ವೆನ್ಸಿಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಅಲ್ಲಿ ತಿಂಡಿ, ತಿನಿಸು, ಹಣ್ಣುಗಳನ್ನು ಮಾರಾಟ ಮಾಡಲು ಪೂರಕ ವಾತಾವರಣವಿಲ್ಲ. ಸೂಕ್ತ ವ್ಯವಸ್ಥೆ ಒದಗಿಸಿದರೆ ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಓಟಿ ರಸ್ತೆ, ಟೆಂಪೋ ಸ್ಟ್ಯಾಂಡ್, ಎನ್ಟಿ ರಸ್ತೆ ಪಕ್ಕದಲ್ಲಿ ತಳ್ಳುವ ಗಾಡಿಗಳಲ್ಲಿ ತಿಂಡಿ-ತಿನಿಸು ಮಾರಾಟ ಮಾಡುತ್ತಿರುವ ನಮಗೆ ಕನ್ಸರ್ವೆನ್ಸಿಗಳಲ್ಲಿ ಮಳೆ, ಬಿಸಿಲಿನಿಂದ ರಕ್ಷಣೆಗೆ ಮೇಲ್ಛಾವಣಿಯುಳ್ಳ ಮಳಿಗೆಗಳನ್ನ್ನು ನಿರ್ವಿುಸಿಕೊಡಬೇಕೆಂದು ಆಗ್ರಹಿಸಿದರು.
ಟಿವಿಸಿ ಸದಸ್ಯ ಎಸ್.ಬಿ.ಅಶೋಕ ಕುಮಾರ್, ಬೀದಿಬದಿ ವ್ಯಾಪಾರಿಗಳಾದ ಚಿನ್ನರಾಜ್, ಮಾರಪ್ಪ, ಬಾಲು, ಸುರೇಶ್, ಅಣ್ಣೇಗೌಡ, ಜಾವೀದ್, ಮಂಜುನಾಥ್, ಶಫಿ ಇತರರಿದ್ದರು.