Shivasharane Hemaraddi Mallamma Jayanti 
ನ್ಯೂಸ್

ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ತಾಯಿಯ ಪಾತ್ರ ಹಿರಿದು: ರಾಜ್ಯ ಮಾಹಿತಿ ಆಯುಕ್ತೆ ಬಿ.ಆರ್.ಮಮತಾ

ಬೆಂಗಳೂರು: ಪ್ರತಿಯೊಂದು ಮಗುವನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ತಾಯಿಯ ಪಾತ್ರ ದೊಡ್ಡದು ಎಂದು ರಾಜ್ಯ ಮಾಹಿತಿ ಆಯುಕ್ತೆ ಡಾ .ಬಿ.ಆರ್.ಮಮತಾ ಅಭಿಪ್ರಾಯಪಟ್ಟರು.

ಪರಿವರ್ತನಂ ಟ್ರಸ್ಟ್ ಹಾಗೂ ಮಾಯಾ ಫೌಂಡೇಶನ್ ವತಿಯಿಂದ ವಿವೇಕ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಯಂದಿರ ದಿನಾಚರಣೆ, ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಪಂಚದಲ್ಲಿ ಅತ್ಯಂತ ಅಮೂಲ್ಯ ಪಾತ್ರವೆಂದರೆ ತಾಯಿ. ಪ್ರಕೃತಿಯಲ್ಲಿನ ಎಲ್ಲ ರೀತಿಯ ಜೀವಿಗಳಲ್ಲೂ ತನ್ನ ಮಗುವಿಗಾಗಿ ಸದಾ ಮಿಡಿಯುವ ಜೀವವೆಂದರೆ ಅದು ತಾಯಿ. ಮಗುವಿನ ಆರೈಕೆಗಾಗಿ ತನ್ನೆಲ್ಲಾ ಸರ್ವಸ್ವವನ್ನು ಮುಡಿಪಾಡಿಗಿಡುತ್ತಾಳೆ. ಸಮಾಜದಲ್ಲಿ ಆ ಮಗುವನ್ನು ಜವಾಬ್ದಾರಿಯುತವಾಗಿ ಬೆಳೆಸುವ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಆಕೆಯ ಪಾತ್ರ ಮಹತ್ವದ್ದು. ನಮ್ಮನ್ನೆಲ್ಲಾ ಸಲಹುತ್ತಿರುವ ಭಾರತ ಮಾತೆಗೂ ನಾವು ಋಣಿಯಾಗಿರಬೇಕು ಎಂದರು.

ಇದೇ ವೇಳೆ ಗರ್ಭಿಣಿಯರು ಹಾಗೂ ಪತ್ರಿಕೋದ್ಯಮ ಮತ್ತು ಕ್ರೀಡಾ ಸಾಧಕರು ಸೇರಿ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಂಎಲ್‌ಸಿ ಶರವಣ, ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಬಾನಂದೂರು ಕೆಂಪಯ್ಯ, ಮಾಯಾ ಫೌಂಡೇಶನ್‌ನ ಸಂಸ್ಥಾಪಕಿ ಎಂ.ಕೆ.ರಮ್ಯ, ಪರಿವರ್ತನಂ ಟ್ರಸ್ಟ್‌ನ ಸಂಸ್ಥಾಪಕ ವಿನೋದ್ ಚೆನ್ನಕೃಷ್ಣ ಇದ್ದರು.