Siddipet: ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮಹಿಳೆಯೊಬ್ಬರು ತನ್ನ ತಿಂಗಳ ವಯಸ್ಸಿನ ಗಂಡು ಮಗುವನ್ನು ಕೊಲೆ ಮಾಡಿದ ಘಟನೆ ತೆಲಂಗಾಣದ ಅಪ್ಪನಪಲ್ಲಿ ಗ್ರಾಮದಲ್ಲಿ ಬುಧವಾರ (ಮೇ.21) ನಡೆದಿದೆ.
ಆರೋಪಿ ಕವಿತಾ (22) ಬುಧವಾರ ಮಧ್ಯಾಹ್ನ ಮನೆಯಲ್ಲಿದ್ದಾಗ ಮುಸುಕುಧಾರಿ ವ್ಯಕ್ತಿಗಳು ತನ್ನ ಮಗುವನ್ನು ಕದ್ದಿದ್ದಾರೆ ಎಂದು ಕುಟುಂಬ ಸದಸ್ಯರಿಗೆ ತಿಳಿಸಿದ್ದಾಳೆ. ನಂತರ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸಹ ಆಟಗಾರ್ತಿ ವಿರುದ್ಧ ಕೇಸ್ ದಾಖಲಿಸಿದ ದೀಪ್ತಿ ಶರ್ಮ; ಕಾರಣ ಕೇಳಿದ್ರೆ ಅಚ್ಚರಿ ಆಗ್ತೀರಾ! | Deepti Sharma
ವಿಚಾರಣೆಯ ಸಮಯದಲ್ಲಿ, ಆಕೆಯ ವರ್ತನೆಯ ಬಗ್ಗೆ ಪೊಲೀಸರು ಅನುಮಾನಗೊಂಡು ಆಕೆಯನ್ನು ಪ್ರಶ್ನಿಸಿದಾಗ, ಕವಿತಾ ತನ್ನ ಮಗನನ್ನು ಮನೆಯ ಹತ್ತಿರದ ಬಾವಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನರ್ಮಟ್ಟಾ ನಿವಾಸಿ ಕವಿತಾ, ಸುಮಾರು ಮೂರು ವರ್ಷಗಳ ಹಿಂದೆ ಸಿದ್ದಿಪೇಟೆ ಮಂಡಲದ ಪುಲ್ಲೂರಿನ ರಾಮಗಲ್ಲ ಶ್ರೀಮಾನ್ ಅವರನ್ನು ವಿವಾಹವಾಗಿದ್ದರು. ಆದರೆ ಶ್ರೀಮಾನ್ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಜೈಲಿಗೆ ಹೋಗಿದ್ದರು. ಹೀಗಾಗಿ ಅವನಿಂದ ದೂರವಾಗಲು ಬಯಸಿದ್ದ ಹೆಂಡತಿಗೆ ಶ್ರೀಮನ್ ಕಿರುಕುಳ ನೀಡುತ್ತಿದ್ದನು. ನಂತರ, ಕವಿತಾ ತನ್ನ ಮೂರು ವರ್ಷಗಳ ಶ್ರೀಮನ್ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ತನ್ನ ಮಗನನ್ನು ಕೊಲ್ಲಲು ನಿರ್ಧರಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)