ನ್ಯೂಸ್

ಮೆಡಿಕಲ್ ಸ್ಟೋರ್​ಗೆ ಹೋಗುವುದಾಗಿ ಹೇಳಿ ಪ್ರಿಯಕರನ ಜತೆ ಮೂರು ಮಕ್ಕಳ ತಾಯಿ ಎಸ್ಕೇಪ್; ಬಳಿಕ ಹೇಳಿದ್ದಿಷ್ಟು...

ಲಖನೌ: ಔಷಧಿ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಮೂರು ಮಕ್ಕಳ ತಾಯಿಯೊಬ್ಬರು ಪ್ರಿಯಕರನ ಜೊತೆ ಓಡಿ ಹೋಗಿ ಮದುವೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಬಿಜ್ನೋರ್ ಜಿಲ್ಲೆಯ ಬಾಧಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಿಯಕರನ ಜೊತೆ ಮದುವೆ ಮಾಡಿಕೊಂಡ ಬಳಿಕ ವಿಡಿಯೋ ಮಾಡಿರುವ ಮಹಿಳೆ, ನಾನು ನನ್ನ ಪ್ರಿಯಕರನೊಂದಿಗೆ ಕೋರ್ಟ್​ನಲ್ಲಿ ಮದುವೆ ಮಾಡಿಕೊಂಡಿದ್ದೇನೆ. ನನ್ನ ಗಂಡನ ಕಿರುಕುಳ ತಾಳಲಾರದೆ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನಗೂ ಹಾಗೂ ನನ್ನ ಪ್ರಿಯಕರನಿಗೆ ಯಾರು ಕಿರುಕುಳ ಕೊಡಲು ಮುಂದಾಗಬೇಡಿ. ಒಂದು ವೇಳೆ ಹಾಗೆ ಮಾಡಿದ್ದಲ್ಲಿ ನಾನು ನಿಮ್ಮಗಳ ವಿರುದ್ಧ ದೂರು ದಾಖಲಿಸುತ್ತೇನೆ.

ಒಂದು ವೇಳೆ ನೀವು ನನ್ನನ್ನು ಹುಡುಕಲು ಮುಂದಾದರೆ ನಿಮ್ಮ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿಕೊಳ್ಳುತ್ತೀರಾ. ನನ್ನಿಷ್ಟದಂತೆ ಬದುಕಲು ಬಿಡಿ. ಒಂದು ವೇಳೆ ನೀವುಗಳು ನೀವುಗಳು ನನ್ನನ್ನು ಹುಡುಕಿ ಕಿರುಕುಳ ಕೊಟ್ಟರೆ ನಾನು ದೂರು ದಾಖಲಿಸುತ್ತೇನೆ. ನಿಮಗೆ ಗೊತ್ತು ತಾನೇ ಈಗ ಮೋದಿ ಸರ್ಕಾರ ನಡೆಯುತ್ತಿದೆ ನನ್ನ ತಂಟೆಗೆ ಬರ್ಬೇಡಿ ಎಂದು ಎಚ್ಚರಿಕೆ ನೀ ಎಂದು ವೈರಲ್ ಆಗಿರುವ ವಿಡಿಯೋದಲ್ಲಿ ಹೇಳಿದ್ದಾಳೆ.

Ghar Ke Kalesh ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈವರೆಗೂ 165.4ಕೆ ವೀವ್ಸ್ ಪಡೆದುಕೊಂಡಿದೆ. ಅನೇಕರು ಮಹಿಳೆಯ ನಡೆಯನ್ನು ಖಂಡಿಸಿ ಟ್ವೀಟ್​ ಮಾಡಿದ್ದು, ಪ್ರಧಾನಿ ಮೋದಿ ಸೇರಿದಂತೆ ಪ್ರಮುಖ ನಾಯಕರನ್ನು ಟ್ಯಾಗ್ ಮಾಡಿ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.