ನ್ಯೂಸ್

VIDEO: ಹಾಡುತ್ತಿದ್ದ ಮಗಳಿಗೆ ಶಾಕ್​ ಕೊಟ್ಟ ಅಮ್ಮ; ಸೀಲಿಂಗ್​ ಸೀಳಿ ಜೋತಾಡಿದರು..!

ಮಗಳು ತನ್ನ ಹಾಡಿನ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರೆ..ಒಮ್ಮೆಲೇ ಅಮ್ಮ ಸೀಲಿಂಗ್​​ನಿಂದ ಬಿದ್ದರು..! ಲಿಝಾ​ ಸಾನ್​ ಮಿಲನ್​ ಎಂಬುವರು ಈ ಹತ್ತು ಸೆಕೆಂಡ್​ಗಳ ವಿಡಿಯೋವನ್ನು ತಮ್ಮ ಟಿಕ್​ಟಾಕ್ ಅಕೌಂಟ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ವಿಡಿಯೋ ಸಿಕ್ಕಾಪಟೆ ವೈರಲ್​ ಕೂಡ ಆಗುತ್ತಿದೆ.

ಲಿಝಾ​ ಅವರು ತಮ್ಮ ಎದುರು ಮೊಬೈಲ್​ ಇಟ್ಟುಕೊಂಡು ಸುಮಧುರ ಕಂಠದಲ್ಲಿ ಹಾಡಲು ಶುರು ಮಾಡುತ್ತಾರೆ. ಕೆಲವೇ ಸೆಕೆಂಡ್​​ಗಳಲ್ಲಿ ಅವರ ಕೋಣೆಯ ಸೀಲಿಂಗ್​​ ಡಬ್​​ ಎಂಬ ದೊಡ್ಡ ಶಬ್ದ ಕೇಳುತ್ತದೆ. ನೋಡಿದರೆ ಲಿಝಾ​ ಅಮ್ಮ ಸೀಲಿಂಗ್​ ಸೀಳಿಕೊಂಡು ಕೆಳಗೆ ಬೀಳುತ್ತಿರುತ್ತಾರೆ. ಅಲ್ಲಿಗೆ ಲಿಝ್​ ಹಾಡು ಕೂಡ ಬಂದ್ ಆಗುತ್ತದೆ.

ಸೀಲಿಂಗ್​​ನಲ್ಲಿ ಒಡೆದು, ತಾಯಿಯ ಕಾಲು ನೇತಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲಿಗೆ ವಿಡಿಯೋ ಕಟ್​ ಆಗುತ್ತದೆ. ಅದನ್ನು ನೋಡಿದ ಲಿಝ್​ ಒಹ್​ ಮೈ ಗಾಡ್​​ ಎಂದು ಉದ್ಘಾರ ತೆಗೆಯುವುದನ್ನು ನೋಡಬಹುದು.

ಈ ಬಗ್ಗೆ ಲಿಝಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ನಾನು ನನ್ನ ಮುಂದಿನ ಸಂಗೀತ ಕಾರ್ಯಕ್ರಮಕ್ಕಾಗಿ ಅಭ್ಯಾಸ ಮಾಡುತ್ತ, ವಿಡಿಯೋ ರೆಕಾರ್ಡ್​ ಮಾಡುತ್ತಿದ್ದೆ. ಆಗ ನನ್ನ ಅಮ್ಮ ಮೇಲಿನ ಅಟ್ಟಕ್ಕೆ ಹೋಗಿದ್ದರು. ಅದ್ಯಾವುದೋ ಲಗ್ಗೇಜ್​ ಹುಡುಕಲು ಅಲ್ಲಿ ಹತ್ತಿದ್ದರು. ಆದರೆ ಆಕಸ್ಮಿಕವಾಗಿ ಬಿದ್ದರು. ಅದೃಷ್ಟವಶಾತ್​ ತಾಯಿಗೆ ಯಾವುದೇ ಗಾಯವಾಗಲಿಲ್ಲ ಎಂದೂ ತಿಳಿಸಿದ್ದಾರೆ.