Mother Death: ತೀರ ಅನಾರೋಗ್ಯದ ಹಿನ್ನೆಲೆ ತಂದೆ ಅಕಾಲಿಕ ಮರಣ ಹೊಂದಿದರೆ, ತಾಯಿ ತೆಗೆದುಕೊಂಡ ಒಂದೇ ಒಂದು ತಪ್ಪು ನಿರ್ಧಾರದಿಂದ ಇದೀಗ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಅನಾಥರಾಗಿದ್ದಾರೆ.
ಪತಿಯ ದಿಢೀರ್ ಸಾವು ತಾಳಲಾರದ ನೋವು ಮಾತ್ರವಲ್ಲದೇ ಜೀವನವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಈಗ ಎರಡು ಮಕ್ಕಳ ಸಂಪೂರ್ಣ ಹೊರೆ ತನ್ನ ಮೇಲೆ ಬಿದ್ದಿತು ಎಂದು ದುಃಖಿಸುತ್ತಿದ್ದ ತಾಯಿ, ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೆ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ನಂದ್ಯಾಲದಲ್ಲಿ ಸಂಭವಿಸಿದೆ.
ನಂದ್ಯಾಲದ ಬಿಲ್ಡಿಂಗ್ಸ್ ಕಾಲೋನಿಯ ರೋಸಿರೆಡ್ಡಿ ರೈಸ್ ಮಿಲ್ ಸ್ಟ್ರೀಟ್ ನಿವಾಸಿ ಪವನ್ ಕುಮಾರ್ (40) ಕಳೆದ ತಿಂಗಳಷ್ಟೇ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದರು. ಪತ್ನಿ ಮಹೇಶ್ವರಮ್ಮ (30) ಮತ್ತು ಇಬ್ಬರು ಪುತ್ರಿಯರಾದ ಜಾಹ್ನವಿ (7) ಮತ್ತು ಹರ್ಷಿತಾ (4)ರನ್ನು ಪವನ್ ಅಗಲಿದರು. ಈ ನೋವಿನಿಂದ ಕಣ್ಣೀರಿಡುತ್ತಿದ್ದ ಮಹೇಶ್ವರಮ್ಮ, ಪತಿ ಮನೆಯಿಂದಾಗಲಿ ಅಥವಾ ತನ್ನ ತವರು ಮನೆಯಿಂದಾಗಲಿ ಯಾರೊಬ್ಬರು ಸಹಾಯ ಹಸ್ತ ನೀಡಲಿಲ್ಲ ಎಂದು ತೀರ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಕೇವಲ 2 ವರ್ಷದ ಮಗಳಿಗೆ 250 ಕೋಟಿ ರೂ. ಆಸ್ತಿ ನೋಂದಾಯಿಸಿದ ಸ್ಟಾರ್ ದಂಪತಿ ಯಾರು ಗೊತ್ತಾ? ranbir kapoor
ಪತಿಯನ್ನು ಕಳೆದುಕೊಂಡ ದುಃಖದಲ್ಲಿ ಚಿಂತೆಗೀಡಾದ ಮಹೇಶ್ವರಮ್ಮ, ಮಾನಸಿಕ ಯಾತನೆಗೆ ಬೇಸತ್ತಿದ್ದರು. ಇದೇ ನೋವಿನಲ್ಲಿ ಭಾನುವಾರ (ಜೂನ್.08) ಮಧ್ಯರಾತ್ರಿ ಮನೆಯ ಪ್ರತ್ಯೇಕ ಕೋಣೆಯಲ್ಲಿ ಬೆಂಕಿ ಹಚ್ಚಿಕೊಳ್ಳುವ ಮೂಲಕ ಸಾವಿಗೆ ಶರಣಾಗಿದ್ದಾರೆ. ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಎಸ್‌ಐ ಸುರೇಶ್, ತಮ್ಮ ತಂಡದೊಂದಿಗೆ ಮನೆಯೊಳಗೆ ಮಲಗಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).