ನ್ಯೂಸ್

ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ...

lakshmihegde

ಬೆಳಗಾವಿ: ಇಬ್ಬರು ಮಕ್ಕಳನ್ನು ಕೆರೆ ನೀರಿಗೆ ಎಸೆದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮದುರ್ಗ ತಾಲೂಕಿನ ಹಣಮಾಪುರ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮವ್ವ ವಡ್ಡರ್​ (35) ಹಾಗೂ ಅವರ ಮಕ್ಕಳಾದ ಕೀರ್ತಿ (10), ಶ್ರಾವಣಿ (3) ಮೃತರು. ಮೊದಲು ಮಕ್ಕಳಿಬ್ಬರನ್ನೂ ನೀರಿಗೆ ನೂಕಿದ ಮಹಿಳೆ ನಂತರ ತಾವು ಅದೇ ಕೆರೆಗೆ ಹಾರಿ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಸ್ಥಳೀಯರು ನೀಡಿದ ಮಾಹಿತಿ ಅನ್ವಯ ರಾಮದುರ್ಗ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.