ಹೈದರಾಬಾದ್: ಅವಳಿ ಮಕ್ಕಳು ಸೇರಿದಂತೆ ಮೂವರು ಗಂಡು ಮಕ್ಕಳನ್ನು ತಾಯಿಯೊಬ್ಬಳು(Mother) ಒಂದರಿಂದ 2 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಅಘತಕಾರಿ ಘಟನೆ ತೆಲಂಗಾಣದ ನಿಜಾಮಬಾದ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಡಿ.7ರಂದು ಅಧಿಕಾರಿಗಳು ಗಸ್ತು ತೀರುಗುತ್ತಿದ್ದ ವೇಳೆ ಪ್ರಕರಣ ಪತ್ತೆ ಹಚ್ಚಿ ಉನ್ನತ ಅಧಿಕಾರಿಗಳಿಗೆ ವರದಿ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ 5 ರಿಂದ 7 ವರ್ಷದ ಮಕ್ಕಳನ್ನು ಅಧಿಕಾರಿಗಳು ರಕ್ಷಿಸಿದ್ದು, ತಾಯಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Shivaraj Tangadagi Statement | 12 ವರ್ಷ ಆದರೂ ಬಿಜೆಪಿ ಅವ್ರು ಒಂದು ಆಣೆಕಟ್ಟಿನ ಬಗ್ಗೆ ಚರ್ಚೆ ಮಾಡಿಲ್ಲ
ಪ್ರಕರಣದ ಹಿನ್ನೆಲೆ..
10 ತಿಂಗಳ ಹಿಂದೆ ಒಂದು ಮಗುವನ್ನು ದುಡ್ಡಿನಾಸೆಗೆ ಮಾರಾಟ ಮಾಡಿದ್ದಾಳೆ. ಬಳಿಕ ಇಬ್ಬರು (ಅವಳಿ) ಮಕ್ಕಳನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾಳೆ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ. ಯಾವುದೇ ಕಾನೂನು ಪ್ರಕ್ರಿಯಿಗೆ ಒಳಪಡದೆ ವ್ಯವಹಾರ ನಡೆದಿದೆ. ಪ್ರಕರಣದ ವಿವರಗಳನ್ನು ಖಚಿತ ಪಡಸಿಕೊಂಡ ಹಿನ್ನೆಲೆ ತಾಯಿ ಮತ್ತು ಮಕ್ಕಳನ್ನು ಖರೀದಿದಾರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಆರ್ಮುರ್ ಠಾಣೆ ಪೊಲೀಸರು ಪ್ರಕರಣವನ್ನು ಕೈಗೆತ್ತಿಗೊಂಡಿದ್ದು, ಕೂಲಂಕುಷವಾಗಿ ಇನಷ್ಟು ವಿವರಗಳನ್ನು ಬಹಿರಂಗಪಡಿಸಲು ಮತ್ತು ಮಕ್ಕಳ ಯೋಗ ಕ್ಷೇಮದ ಬಗ್ಗೆ ಖಚಿತತೆ ಪಡಿಸಿಕೊಳ್ಳಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ರಕ್ಷಣೆ ಮಾಡಿದ ಮಕ್ಕಳು ಸದ್ಯಕ್ಕೆ ಮಕ್ಕಳ ಕಲ್ಯಾಣಧಿಕಾರಿಗಳ ಅರೈಕೆಯಲಿದ್ದಾರೆ,(ಏಜೆನ್ಸೀಸ್).