ಕತಿಹಾರ್: ಓರ್ವ ಮಹಿಳೆ ಮತ್ತು ಆಕೆಯ ಮಕ್ಕಳಿಬ್ಬರ ಕತ್ತು ಸೀಳಿ ಅಮಾನುಷವಾಗಿ ಹತ್ಯೆಗೈದಿರುವ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ಜೈಲಿನಲ್ಲಿದ್ದಕೊಂಡೇ ಆ್ಯಸಿಡ್ ಸೇವಿಸಿದ ಖೈದಿ: ಕಾರಣ ಹೀಗಿದೆ..
ಮೃತರನ್ನು ಫಿರೋಜ್ ಆಲಂ ಎಂಬಾತನ ಮೊದಲ ಪತ್ನಿ ಸದಾಬ್ ಝರಿನ್ ಖಾತೂನ್ (35) ಮತ್ತು ಇಬ್ಬರು ಮಕ್ಕಳಾದ ಫೈಜಾನ್ ಫಿರೋಜ್ (6) ಮತ್ತು ಪಾಯಾ ಫಿರೋಜ್ (10) ಎಂದು ಗುರುತಿಸಲಾಗಿದೆ. ಮಂಗಳವಾರದಂದು ಮಧ್ಯರಾತ್ರಿ ಮನೆಯಲ್ಲಿಯೇ ಈ ಘಟನೆ ನಡೆದಿದೆ. ತ್ರಿವಳಿ ಕೊಲೆ ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಫಿರೋಜ್ ಆಲಂ ತನ್ನ ಹಳ್ಳಿಯ ಸಮೀಪವಿರುವ ಜಾತ್ರೆಗೆ ಹೋಗಿದ್ದನು. ಮರುದಿನ ಬೆಳಿಗ್ಗೆ ಮನೆಗೆ ಬಂದಾಗ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದನ್ನು ಆಘಾತಕ್ಕೆ ಒಳಗಾಗಿದ್ದಾನೆ. ಕೂಡಲೇ ಪಕ್ಕದ ಕೋಣೆಯಲ್ಲಿ ಮಲಗಿದ್ದ ಅವನ ಎರಡನೇ ಹೆಂಡತಿಗೆ ಈ ವಿಷಯವನ್ನು ತಿಳಿಸಿದ್ದು, ಘಟನೆಯ ಬಗ್ಗೆ ತನಗೆ ಸುಳಿವಿಲ್ಲ ಎಂದು ಆಕೆ ಹೇಳಿದ್ದಾಳೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಪೊಲೀಸರು ಮೃತದೇಹಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮೂವರನ್ನು ಚೂಪಾದ ವಸ್ತುವಿನಿಂದ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್)