ಬೆಂಗಳೂರು: ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ, ನಿರ್ದೇಶಕ, ಬರಹಗಾರ ರಾಜ್ ಬಿ.ಶೆಟ್ಟಿ ನಟನೆಯ ಬಹುನಿರೀಕ್ಷಿತ 'ಟೋಬಿ' ಚಿತ್ರದ ಟ್ರೇಲರ್ ಇದೀಗ ಯೂಟ್ಯೂಬ್ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ.
'ಟೋಬಿ' ಚಿತ್ರದ ಬಗ್ಗೆ ಬಹಳ ಕಾತರದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರಿಗೆ ಮತ್ತು ರಾಜ್ ಬಿ.ಶೆಟ್ಟಿ ಅಭಿಮಾನಿಗಳಿಗೆ ಇದೀಗ ಸಂತಸ ಮೂಡಿದ್ದು, ಸಿನಿಮಾದ ಟ್ರೇಲರ್ ನೋಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಪೋಸ್ಟರ್ ಮೂಲಕವೇ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಟೋಬಿ, ಸಿನಿಮಾದಲ್ಲಿ ರಾಜ್ ಅವರ ಪಾತ್ರ ಹೇಗಿರಲಿದೆ ಎಂಬುದರ ಝಲಕ್ ಅನ್ನು ಚಿತ್ರತಂಡ ಟ್ರೇಲರ್ನಲ್ಲಿ ಬಹಿರಂಗಪಡಿಸಿದೆ.
ಒಟ್ಟಾರೆ ಚಿತ್ರದ ಟ್ರೇಲರ್ ರಾಜ್ ಬಿ.ಶೆಟ್ಟಿಯ ಪಾತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ, ಕುತೂಹಲವನ್ನು ಹೆಚ್ಚಿಸಿದ್ದು, ಇದೀಗ ಆಗಸ್ಟ್ 23 ರಂದು ಚಿತ್ರದ ಬಿಡುಗಡೆಯತ್ತ ಸಿನಿಪ್ರೇಕ್ಷಕರ ಚಿತ್ತ ಮೂಡಿದೆ. ಬಿಡುಗಡೆಗೊಂಡ ಕೆಲವೇ ನಿಮಿಷಗಳಲ್ಲಿ ಟ್ರೇಲರ್ ಉತ್ತಮ ಪ್ರತಿಕ್ರಿಯೆ ಜತೆಗೆ ಅಧಿಕ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದೆ.