ಸಾಂದರ್ಭಿಕ ಚಿತ್ರ 
ನ್ಯೂಸ್

ಸಮುದ್ರದಲ್ಲಿ ದೋಣಿ ಮುಳುಗಿ 90 ಜನ ಜಲಸಮಾಧಿ

ನವದೆಹಲಿ: ದಕ್ಷಿಣ ಆಫ್ರಿಕಾದ ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದ ಬಳಿ ಮೀನುಗಾರಿಕಾ ದೋಣಿ ಮುಳುಗಿ ಮಕ್ಕಳು ಸೇರಿದಂತೆ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದ ಬಳಿ ದುರಂತ ಸಂಭವಿಸಿದ್ದು, 130 ಮಂದಿ ಪ್ರಯಾಣಿಸುತ್ತಿದ್ದ ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿಯಾಗಿದ್ದಾರೆ.

ಮೊಜಾಂಬಿಕ್ ದ್ವೀಪದಿಂದ ನಂಪುಲಾ ದ್ವೀಪಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ. ದೋಣಿಯಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ತುಂಬಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.  ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮೊಜಾಂಬಿಕ್​ನಲ್ಲಿ ಕಾಲರಾ ಪ್ರಕರಣಗಳು ಕೂಡ ಹೆಚ್ಚಿದೆ. ಹೀಗಾಗಿ ಜನ ಇಲ್ಲಿಂದ ವಲಸೆ ಹೋಗುತ್ತಿದ್ದಾರೆ. ಇದಲ್ಲದೇ ನೆರೆಯ ಕಾಬೋ ಡೆಲ್ಗಾಡೊದಲ್ಲಿ ಜಿಹಾದಿ ದಾಳಿಯಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನಲಾಗಿದೆ.