ನ್ಯೂಸ್

ಗುಡುಗು ಸಹಿತ ಮಳೆಗೆ 760 ಕ್ಕೂ ಹೆಚ್ಚು ಮನೆಗಳು ಹಾನಿ; ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು| Maharastra

Maharastra; ಮಹಾರಾಷ್ಟ್ರದ ಕರಾವಳಿಯ ಪಾಲ್ಘರ್ ಜಿಲ್ಲೆಯಲ್ಲಿ ಅಕಾಲಿಕ ಮಳೆ ಮತ್ತು ಗುಡುಗು ಸಹಿತ ಮಳೆಯಾಗಿದ್ದು, ಪರಿಣಾಮ 760 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಇನ್ನೂ ಭಾರೀ ಮಳೆ ಹಾಗೂ ಗುಡುಗಿನ ಪರಿಣಾಮ, ವಿದ್ಯುತ್ ಸ್ಪರ್ಶದಿಂದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ಮತ್ತು ಬಿರುಗಾಳಿಯಿಂದಾಗಿ ಸುಮಾರು 50 ಮೀನುಗಾರಿಕಾ ದೋಣಿಗಳು ಹಾನಿಗೊಳಗಾಗಿವೆ ಎಂದು ಹೇಳಲಾಗಿದೆ.

ಮಂಗಳವಾರ ರಾತ್ರಿ ಮುಂಬೈ ಮತ್ತು ಅದರ ಪಕ್ಕದ ಥಾಣೆ, ಪಾಲ್ಘರ್ ಮತ್ತು ರಾಯಗಢ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ.

ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಮತ್ತು ಭಾರೀ ಮಳೆಯಿಂದಾಗಿ ಪಾಲ್ಘರ್‌ನ ಹಲವಾರು ತಾಲೂಕುಗಳು ಮಳೆಯಲ್ಲಿ ನಲುಗಿ ಹೋಗಿವೆ. ಇದರ ಪರಿಣಾಮವಾಗಿ, ಸುಮಾರು 767 ಮನೆಗಳಿಗೆ ಹಾನಿಯಾಗಿದೆ. ದಹನುವಿನಲ್ಲಿ 230 ಮನೆಗಳಿಗೆ ಹಾನಿಯಾಗಿದೆ, ವಿಕ್ರಮ್‌ಗಢ ಮತ್ತು ವಾಡಾದಲ್ಲಿ ತಲಾ 92, ಜವಾಹರ್‌ನಲ್ಲಿ 89, ಮೊಖಡಾದಲ್ಲಿ 87, ಪಾಲ್ಘರ್‌ನಲ್ಲಿ 85, ತಲಸಾರಿಯಲ್ಲಿ 63 ಮತ್ತು ವಸಾಯಿಯಲ್ಲಿ 29 ಮನೆಗಳಿಗೆ ಹಾನಿಯಾಗಿದೆ ಎಂದು ಪಾಲ್ಘರ್ ಜಿಲ್ಲೆಯ ವಿಪತ್ತು ನಿರ್ವಹಣಾ ಮುಖ್ಯಸ್ಥ ವಿವೇಕಾನಂದ ಕದಮ್ ತಿಳಿಸಿದ್ದಾರೆ.

ವೇದಿ ಗ್ರಾಮದಲ್ಲಿ ಮೇಕೆ ಮೇಯಿಸಲು ಹೋದಾಗ 65 ವರ್ಷದ ಮೋರೇಶ್ವರ ಲೋಹರ್ ಎಂಬ ವ್ಯಕ್ತಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ.

(ಏಜೆನ್ಸೀಸ್)

ಭಾರತ ಹವಾಮಾನ ಇಲಾಖೆ ಜಿಲ್ಲೆಗೆ ಆರೆಂಜ್​ ಅಲರ್ಟ್​ ಘೋಷಣೆ ಮಾಡಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ. ತೀರಾ ಅಗತ್ಯವಿಲ್ಲದಿದ್ದರೆ ಮನೆಯೊಳಗೆ ಇರಲು ನಾಗರಿಕರನ್ನು ಕೋರಲಾಗಿದೆ.

ಮಾಹಿತಿ ತಿಳಿದ ಕೂಡಲೇ ಪಾಲ್ಘರ್ ಜಿಲ್ಲಾಧಿಕಾರಿ ಡಾ.ಇಂದು ರಾಣಿ ಜಾಖರ್ ಅವರು ಹಿರಿಯ ಅಧಿಕಾರಿಗಳ ತಂಡವನ್ನು ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಜಿಲ್ಲೆಯ ಕೆಲವು ಭಾಗಗಳಿಗೆ ಸಹಾಯ ಮಾಡಲು ಕಳುಹಿಸಿದರು. ಅಧಿಕಾರಿಗಳು ಸಂತ್ರಸ್ತ ಮೀನುಗಾರರು ಮತ್ತು ನಿವಾಸಿಗಳನ್ನು ಭೇಟಿ ಮಾಡಿ ಅವರಿಗೆ ಸರ್ಕಾರದ ನೆರವು ನೀಡುವುದಾಗಿ ಭರವಸೆ ನೀಡಿದರು.