ನವದೆಹಲಿ: ತಾಪಮಾನ ಏರಿಕೆಯಿಂದಾಗಿ ಹಜ್ ಯಾತ್ರೆಗೆ ಮೆಕ್ಕಾಗೆ ತೆರಳಿದ್ದವರ ಪೈಕಿ 550 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮೃತರಲ್ಲಿ ಬಹುತೇಕರು ಈಜಿಪ್ಟಿಯನ್ ಪ್ರಜೆಗಳು ಎಂದು ಹೇಳಲಾಗಿದೆ.
ಕನಿಷ್ಠ 60 ಯಾತ್ರಿಕರು ಬಿಸಿಲಿನ ತಾಪದಿಂದ ಸಾವನ್ನಪ್ಪಿದ್ದಾರೆ. ಪ್ರತಿ ವರ್ಷವೂ ಹಜ್ ಯಾತ್ರೆಯ ಸಮಯದಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯೆಸ್ನಷ್ಟಿರುತ್ತಿತ್ತು ಈ ಬಾರಿ ಭಾರಿ ಏರಿಕೆ ಕಂಡಿದೆ.
ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರವು ಸೋಮವಾರ ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ (125 ಫ್ಯಾರನ್‌ಹೀಟ್) ತಲುಪಿದೆ ಎಂದು ಹೇಳಿದೆ.
ಮುಸ್ಲಿಮರ ಪವಿತ್ರ ಯಾತ್ರೆ ಎಂದೇ ಕರೆಸಿಕೊಳ್ಳುವ ಹಜ್ ಯಾತ್ರೆ ಜೂನ್ 14ರಿಂದ ಪ್ರಾರಂಭವಾಗಿತ್ತು. ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಎಂದರೆ ಅದು ಮೆಕ್ಕಾ, ಸೌದಿ ಅರೇಬಿಯಾದ ಈ ನಗರ ಮೆಕ್ಕಾಗೆ ಹಜ್ ಯಾತ್ರೆ ಭಾಗವಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ವರ್ಷ ಭೇಟಿ ನೀಡುತ್ತಾರೆ.