ನ್ಯೂಸ್

35 ಸಾವಿರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು: ಅರವಿಂದ ಲಿಂಬಾವಳಿ ಹೇಳಿಕೆ | 1500 more complaints

ಬೆಂಗಳೂರು: ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದ 35 ಸಾವಿರಕ್ಕೂ ಹೆಚ್ಚು ಜನರು ರಾಜ್ಯದಲ್ಲಿ ವಾಸವಿರುವ ಮಾಹಿತಿ ನಮ್ಮ ವಾರ್ ರೂಮ್‌ಗೆ ಬಂದಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ನಾವು ಸ್ಥಾಪಿಸಿದ ವಾರ್ ರೂಮ್‌ಗೆ 1500ಕ್ಕೂ ಹೆಚ್ಚು ಕರೆಗಳು ಬಂದಿವೆ. ಅಕ್ರಮ ಬಾಂಗ್ಲಾ ವಲಸಿಗರು ಮನೆ ಕೆಲಸ, ಮಕ್ಕಳ ಪಾಲನೆ, ಕಾಫಿ ಎಸ್ಟೇಟ್ ಮುಂತಾದೆಡೆ ಕೆಲಸ ಮಾಡುತ್ತಿದ್ದಾರೆ.

ರಾಜ್ಯಕ್ಕೆ ಅಕ್ರಮ ವಸಲಿಗರನ್ನು ಕರೆ ತರಲು 2,600ಕ್ಕೂ ಹೆಚ್ಚು ಏಜೆಂಟರಿದ್ದಾರೆ. ಜೂನ್ 10ರ ಬಳಿಕ ನಮ್ಮ ತಂಡ ಅಕ್ರಮ ವಲಸಿಗರು ಇರುವ ಪ್ರದೇಶಕ್ಕೆ ಭೇಟಿ ನೀಡಲಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ ರಾಜ್ಯದ ರೈತರು, ಕೂಲಿ ಕಾರ್ಮಿಕರ ಕೆಲಸವನ್ನು ಅಕ್ರಮ ವಲಸಿಗರು ಕಿತ್ತುಕೊಳ್ಳುತ್ತಿದ್ದಾರೆ. ನುಸುಳುಕೋರರಲ್ಲಿ ಒತ್ತುವರಿದಾರರು, ಡ್ರಗ್ಸ್ ಪೆಡ್ಲರ್‌ಗಳು ಇದ್ದಾರೆ. ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು, ಕೇಂದ್ರದ ಸೂಚನೆಯನ್ನು ಪಾಲಿಸುತ್ತಿಲ್ಲ ಎಂದು ದೂರಿದರು.