ನ್ಯೂಸ್

50% ಆಫರ್​, ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​: ಟ್ರಾಫಿಕ್​ ಫೈನ್ ಪಾವತಿಗೆ ಭರ್ಜರಿ ಸ್ಪಂದನೆ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ದಂಡ ಪಾವತಿಗೆ ಶೇ. 50 ವಿನಾಯಿತಿ ಒದಗಿಸಿರುವುದಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದ್ದು, ಕೊನೆಯ ದಿನವಾಗಿರುವ ಈ ದಿನ ಕೊನೆಗೊಳ್ಳುವ ಮೊದಲೇ ಒಟ್ಟು ನೂರು ಕೋಟಿ ರೂಪಾಯಿಗೂ ಅಧಿಕ ದಂಡ ಸಂಗ್ರಹವಾಗಿದೆ.

ಶೇ. 50 ವಿನಾಯಿತಿಯಲ್ಲಿ ಫೆ. 3ರಿಂದ ಅವಕಾಶ ಕಲ್ಪಿಸಲಾಗಿದ್ದು, ಫೆ. 11 ಕೊನೆಯ ದಿನವೆಂದೂ ಘೋಷಿಲಾಗಿತ್ತು. ಮೊದಲ ದಿನವೇ 7 ಕೋಟಿಗೂ ಅಧಿಕ ದಂಡ ಸಂಗ್ರಹವಾಗಿದ್ದು, ಕೊನೆಯ ದಿನವಾದ ಇವತ್ತೊಂದೇ ದಿನ ಅದೂ ಮಧ್ಯಾಹ್ನ 3.15 ನಿಮಿಷದವರೆಗೆ 12 ಕೋಟಿ ರೂಪಾಯಿಗೂ ಅಧಿಕ ದಂಡ ಸಂಗ್ರಹವಾಗಿದೆ.

ವಿಶೇಷವೆಂದರೆ 9 ದಿನಗಳ ಅವಧಿ ಪೂರ್ಣವಾಗುವ ಮೊದಲೇ ಅಂದರೆ 9ನೇ ದಿನವಾದ ಇಂದು ಮಧ್ಯಾಹ್ನ 3.15ರ ವರೆಗೆ ಒಟ್ಟು 35,60,239 ಪ್ರಕರಣಗಳು ಇತ್ಯರ್ಥವಾಗಿದ್ದು, ಒಟ್ಟು 102,02,28,098 ರೂ. ದಂಡ ಸಂಗ್ರಹವಾಗಿದೆ.

9 ದಿನಗಳ ದಂಡ ಸಂಗ್ರಹದ ಪೂರ್ಣ ವಿವರ ಇಂತಿದೆ...