ನ್ಯೂಸ್

ಪುಸ್ತಕದ ಮೊದಲ ಸಾಲು ಓದುತ್ತಿದ್ದಂತೆ ಅದು ಯಾವ ಪುಸ್ತಕ ಎಂದು ಹೇಳುತ್ತಾನೆ ಈ 14 ವರ್ಷದ ಬಾಲಕ!

ಶಾಲಾ ಬಾಲಕನಿಗೆ ತಾನು ಏನಾದರೂ ಸಾಧನೆ ಮಾಡಿ ಗಿನ್ನೀಸ್​ ರೆಕಾರ್ಡ್​ ಮಾಡಬೇಕು ಎನಿಸಿತು. ಆಗ ಮೊಂಟಿ ಲಾರ್ಡ್ ಎಂಬ ಬಾಲಕ​ ಪುಸ್ತಕಗಳ ಮೊದಲ ಸಾಲುಗಳನ್ನು ಓದಲು ಆರಂಭಿಸಿದ.

ಈಗ ಈ 14 ವರ್ಷದ ಬಾಲಕ ಕೇವಲ ಮೊದಲ ಸಾಲು ಹೇಳಿದರೆ ಸಾಕು 129 ಪುಸ್ತಕಗಳನ್ನು ಗುರುತಿಸುತ್ತಾನೆ! ಇದರಿಂದಾಗಿ ಮೊಂಟಿ ಗಿನ್ನೀಸ್​ ರೆಕಾರ್ಡ್​ ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ.

ಈ ಮೊದಲು ಇಂತಹ ರೆಕಾರ್ಡ್​ ಭಾರತೀಯನ ಹೆಸರಲ್ಲಿತ್ತು. ಆಗ ಮೊಂಟಿ ಅದನ್ನು ದಾಟಿ 129 ಪುಸ್ತಕಗಳ ಹೆಸರನ್ನು ಗುರುತಿಸಿದ್ದಾನೆ. ಮೊಂಟಿ ಸದ್ಯ ಸೈಕಾಲಜಿ ವಿಷಯದಲ್ಲಿ ದೂರ ಶಿಕ್ಷಣದ ಮೂಲಕ ಅಭ್ಯಾಸ ನಡೆಸುತ್ತಿದ್ದಾನೆ.

ಮೊಂಟಿ ತಂದೆ ಫ್ಯಾಬಿನ್​ ಲಾರ್ಡ್​ ಮಗನಿಗೆ ಈ ಬಗ್ಗೆ ಚಾಲೆಂಜ್​ ಹಾಕಿದ್ದರು. ಏನಾದರು ಸಾಧನೆ ಮೂಲಕ ರೆಕಾರ್ಡ್​ ಮಾಡು ಎಂದು. ಅದನ್ನು ಒಪ್ಪಿಕೊಂಡ ಮೊಂಟಿ ಈಗ ಸಾಧಕನಾಗಿದ್ದಾನೆ.

ಮೊಂಟಿ ಒಟ್ಟು 200 ಪುಸ್ತಕಗಳನ್ನು ತನ್ನ ತಂದೆ ಸಹಾಯದಿಂದ ಓದಿದ್ದ. ತಂದೆ ಫ್ಯಾಬಿನ್​ ಓದುವುದನ್ನು ವಿಡಿಯೋ ಮಾಡಿದ್ದರು. ಇದರ ಸಹಾಯದಿಂದ ಮೊಂಟಿ ಪುಸ್ತಕದ ಸಾಲುಗಳನ್ನು ನೆನಪಿಟ್ಟುಕೊಂಡಿದ್ದಾನೆ.

ಈ 200 ಪುಸ್ತಕಗಳಲ್ಲಿ ಪ್ರಖ್ಯಾತ ಪುಸ್ತಕಗಳಾದ ಹ್ಯಾರಿ ಪಾಟರ್​, ದಿ ಗ್ರುಫೆಲೊ, ಅಡ್ವೆಂಚರ್ಸ್​ ಆಫ್​ ಹಕ್ಕಲ್​ಬೆರ್ರಿ ಫಿನ್​ ಇವುಗಳ ಜತೆಗೆ ವಿಲೀಯಮ್​ ಷೇಕ್ಸ್​ಪೀಯರ್​ ಅವರ ನಾಟಕಗಳು, ಇಯಾನ್​ ಫ್ಲೆಮಿಂಗ್ಸ್​ ಅವರ ಬಾಂಡ್​ ಪುಸ್ತಕಗಳನ್ನು ಮೊಂಟಿ ನೆನಪಿಟ್ಟುಕೊಂಡಿದ್ದಾನೆ.

ಪುಸ್ತಕದ ಮೊದಲ ಸಾಲುಗಳನ್ನು ನಾನು ನೆನಪಿಟ್ಟುಕೊಳ್ಳಲು ಎರಡರಿಂದ ಮೂರು ವಾರ ಬೇಕಾಗಿತ್ತು. ನಾನು ಪುಸ್ತಕದ ಶೀರ್ಷಿಕೆ ಜತೆಗೆ ನೆನಪಿಸಿಕೊಳ್ಳುತ್ತಿದ್ದೆ. ಹ್ಯಾರಿ ಪಾಟರ್​ನಂತಹ ಪುಸ್ತಕಗಳು ತುಂಬ ಸುಲಭ ಆದರೆ, ಲಾರ್ಡ್​ ಆಫ್​ ದಿ ರಿಂಗ್ಸ್​ ಪುಸ್ತಕ ಕಠಿಣವಾಯಿತು ಎನ್ನುತ್ತಾನೆ ಮೊಂಟಿ. (ಏಜೆನ್ಸೀಸ್​)