ನ್ಯೂಸ್

ಜು.12ರಂದು ಮಠಾಧೀಶರ ಪರಿಷತ್ ಮಾಸಿಕ ಸಭೆ

ಶಿವಮೊಗ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಮಲೆನಾಡು ಮಠಾಧೀಶರ ಪರಿಷತ್‌ನ ಪ್ರಥಮ ಮಾಸಿಕ ಸಭೆ ಜು.12ರಂದು ಬೆಳಗ್ಗೆ 10.30ಕ್ಕೆ ಸವಳಂಗ ರಸ್ತೆ ಕುವೆಂಪುನಗರದ ನೂತನ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಹೇಳಿದರು.

ಮಹಾಸಭಾದ ನೂತನ ಸಮುದಾಯ ಭವನವನ್ನು 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ನೂತನ ಕಟ್ಟಡಕ್ಕೆ ಮಲೆನಾಡಿನ ಎಲ್ಲ ಮಠಾಧೀಶರು ಆಗಮಿಸುತ್ತಾರೆ. ಜತೆಗೆ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್, ಎಸ್.ಎನ್.ಚನ್ನಬಸಪ್ಪ, ಮಾಜಿ ಎಂಎಲ್‌ಸಿಗಳಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ ಸೇರಿ ಸಮಾಜದ ಗಣ್ಯರು, ಮಹಾಸಭಾದ ದಾನಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 10.30ಕ್ಕೆ ಸಭೆ ಆರಂಭವಾಗಲಿದೆ. ನಂತರ ಮಧ್ಯಾಹ್ನ 3ಕ್ಕೆ ಧರ್ಮಸಭೆ ನಡೆಯಲಿದೆ. ಮಹಾಸಭಾದ ಗೌರವಾಧ್ಯಕ್ಷ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು. ಪ್ರಮುಖರಾದ ಬಳ್ಳೆಕೆರೆ ಸಂತೋಷ್, ರಾಜಶೇಖರ್, ಉಮೇಶ್ ಕತ್ತಿಗೆ, ಧೃವ, ಸಚಿನ್, ಅನಿಲ್, ಅವಿನಾಶ್, ಮಲ್ಲಿಕಾರ್ಜುನ ಕಾನೂರು ಸುದ್ದಿಗೋಷ್ಠಿಯಲ್ಲಿದ್ದರು.