CWMA orders not to release Cauvery water to Tamil Nadu
- ಕರ್ನಾಟಕ ರಾಜ್ಯದಲ್ಲಿ ಮುಂಗಾರು ಕೊರತೆ ಮತ್ತು ಬರದ ಪರಿಸ್ಥಿತಿ
- ತಮಿಳುನಾಡಿಗೆ ನೀರು ಬಿಡದಿರಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ
- ಕರ್ನಾಟಕದಲ್ಲಿ ಸದ್ಯ ಇರುವ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಬಳಸಿ ಎಂದು ನಿರ್ದೇಶನ
CWMA orders not to release Cauvery water to Tamil Nadu: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಕರ್ನಾಟಕದಲ್ಲಿ ಮುಂಗಾರು ಕೊರತೆ ಹಾಗೂ ಬರದ ಪರಿಸ್ಥಿತಿ ಉಂಟಾಗಿರುವ ಕಾರಣ, ತಮಿಳುನಾಡಿಗೆ ಕಾವೇರಿ ನೀರು ಬಿಡದಿರಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ಹೊರಡಿಸಿದೆ. ಯಥಾ ಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶಿಸಿದೆ.
ಎಲ್ಲೆಡೆ ಬರದ ಛಾಯೆ ಆವರಿಸಿದೆ. ಹೀಗಾಗಿ ಕೃಷಿ ಕಾವೇರಿ ನೀರನ್ನು ಬಳಕೆ ಮಾಡಬೇಡಿ. ಕುಡಿಯಲು ಮಾತ್ರ ನೀರು ಬಳಕೆ ಮಾಡುವಂತೆ ನೋಡಿಕೊಳ್ಳಿ ಎಂದು CWMA ಜುಲೈ.22ರಂದು ತಮಿಳು ನಾಡು ಹಾಗೂ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ. ನೀರಿನ ಕೊರತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಕೃಷಿ ಚಟುವಟಿಕೆಗೆ ಡ್ಯಾಂ ನೀರು ಬಳಕೆ ಮಾಡಬೇಡಿ ಎಂದು ತಾಕೀತು ಮಾಡಿದೆ.
ಕೃಷಿಗೆ ಬೇಡ, ಕುಡಿಯಲಷ್ಟೇ ಬಳಸಿ
ಕರ್ನಾಟಕದಲ್ಲಿ ಪಸ್ತುತ ಲಭ್ಯವಿರುವ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡಬೇಕು. ಕೃಷಿಗೆ ಬಳಸದಂತೆ ಕರ್ನಾಟಕದ ಅಧಿಕಾರಿಗಳಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶಿಸಿದೆ. ತಮಿಳುನಾಡಿನ ಮೆಟ್ಟೂರು ಡ್ಯಾಮ್ ನಲ್ಲಿ ಸದ್ಯ ಕುಡಿಯಲು ನೀರು ಇದೆ . ಕೇವಲ ಕುಡಿಯುವ ನೀರಿಗಾಗಿ ಬಳಕೆ ಮಾಡಿದರೆ, ಈ ವರ್ಷಕ್ಕೆ ಆಗುವಷ್ಟು ನೀರು ತಮಿಳುನಾಡಿಗೆ ಸಾಕು ಎಂದು ಹೇಳಿತು.
ಮುಂದುವರೆದು, ತಮಿಳುನಾಡು ಸಹ ಮುಂದಿನ ಆದೇಶದವರೆಗೆ, ಮೆಟ್ಟೂರು ಡ್ಯಾಮ್ನಲ್ಲಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ನೀರು ಬಳಕೆ ಮಾಡಬೇಕು. ಕೃಷಿ ಚಟುವಟಿಕೆಗೆ ಡ್ಯಾಂ ನೀರನ್ನು ಬಳಕೆ ಮಾಡಬೇಡಿ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ಕೊಟ್ಟಿದೆ.
ಜುಲೈ 28ಕ್ಕೆ ಪುನಃ ಸಭೆ
ಜುಲೈ 26ರ ಬಳಿಕ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಒಂದು ವಾರದ ಬಳಿಕ ಅಂದರೆ, ಜುಲೈ 28ಕ್ಕೆ ಪುನಃ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ, ನೀರು ಬಿಡುವುದೋ ಅಥವಾ ಬೇಡವೊ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ
ಬೆಳೆಯೂ ಇಲ್ಲ, ಕುಡಿಯಲು ನೀರೂ ಇಲ್ಲ! ಅನ್ನದಾತನ ಕಣ್ಣೀರು ಒರೆಸುವವರು ಯಾರು ? ರಾಜ್ಯದಲ್ಲಿನ 36,202 ಕೆರೆಗಳ ಪೈಕಿ ಕೇವಲ 584 ಕೆರೆಗಳು ಮಾತ್ರ ಭರ್ತಿಯಾಗಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತ ತಲುಪಿವೆ. ಗ್ರಾಮೀಣ ಭಾಗದ ಜೀವನಾಡಿಯಾಗಿದ್ದ ಕೆರೆಗಳು ಬರಿದಾಗಿರುವುದು ರೈತರ ಪಾಲಿಗೆ ಮರಣಶಾಸನವಾಗುತ್ತಿದೆ. 5,862 ಕೆರೆಗಳು ಸಂಪೂರ್ಣ ಖಾಲಿ. 734 ಹಳ್ಳಿಗಳಿಗೆ ಟ್ಯಾಂಕರ್ ನೀರೇ ಆಸರೆ. ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾಂಗ್ರೆಸ್ಸ್ ಸರ್ಕಾರ
ಸರ್ಕಾರ, ತಕ್ಷಣವೇ ಬರ ಪೀಡಿತ ಪ್ರದೇಶಗಳನ್ನು ಘೋಷಿಸಿ, ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ಪರಿಹಾರ ನೀಡಬೇಕು ಎಂದು ಪಕ್ಷವು ಆಗ್ರಹಿಸುತ್ತದೆ ಎಂದು ಜೆಡಿಎಸ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ, (ಏಜೆನ್ಸೀಸ್).